Alma Corner

ಬಿಗ್‌ ಬಾಸ್‌ ಮನೆಯಿಂದ ಹೊರಹೋದ್ರಾ ತ್ರಿವಿಕ್ರಂ? ಬಿಕ್ಕಿ-ಬಿಕ್ಕಿ ಅತ್ತ ಗೆಳತಿ ಭವ್ಯ ಗೌಡ…!

ಕನ್ನಡ ಬಿಗ್‌ ಬಾಸ್‌ ಸೀಸನ್‌ 11ರಲ್ಲಿ ಪ್ರತಿದಿನ ಏನಾದರೂ ಒಂದು ಆಶ್ಚರ್ಯ ನಡೆಯುತ್ತಿದೆ. ಇದು ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟುಹಾಕುತ್ತಿದೆ.
ಕಳೆದ ವಾವಷ್ಟೇ ಗೆಲ್ಲಬೇಕಾಗಿದ್ದ ಸ್ಪರ್ಧಿ ಶಿಶಿರ್‌ ಶಾಸ್ತ್ರಿ ಬಿಗ್‌ ಬಾಸ್‌ ಮನೆಯಿಂದ ಎಲಿಮಿನೆಟ್‌ ಆಗಿ ಹೊರ ಬಂದರು. ಇದೀಗ ಅಂತಹ ಮತ್ತೊಬ್ಬ ಸ್ಪರ್ಧಿಯೇ ಬಿಗ್‌ ಬಾಸ್‌ ಮನೆಯಿಂದ ಹೊರ ಬಂದಿದ್ದಾರೆ. ಈ ವಿಚಾರ ಈಗ ಮನೆಯಲ್ಲಿರುವ ಸ್ಪರ್ಧಿಗಳಿಗೆ ಭಾರೀ ಗೊಂದಲ ಉಂಟುಮಾಡಿದೆ.
ಕಳೆದ ವಾರ ಶಿಶಿರ್‌ ಅವರು ಹೊರ ಬಂದಿದಕ್ಕೆ ಶಾಕ್‌ ಆದ ಸ್ಪರ್ಧಿಗಳು, ಇದೀಗ ತ್ರಿವಿಕ್ರಂ ಅವರು ಹೊರ ಬಂದಿರೋದು ಮನೆಯ ಬಹುತೇಕ ಪ್ರೇಕ್ಷಕರು ಆಶ್ಚರ್ಯಗೊಂಡಿದ್ದಾರೆ. ಬಿಗ್‌ ಬಾಸ್‌ ಅವರ ಅಸಲಿ ಪ್ಲಾನ್‌ ಎನು ಅನ್ನುವುದು ಇನ್ನೂ ಯಾರಿಗೂ ಗೊತ್ತಿಲ್ಲ.


ಬಿಗ್‌ ಬಾಸ್ ನಿಂದ ತ್ರಿವಿಕ್ರಂ ಅವರನ್ನು ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಮನೆಯ ಮುಖ್ಯದ್ವಾರದಿಂದ ಹೊರ ಕಳುಹಿಸಿದರು. ತ್ರಿವಿಕ್ರಂ ಅವರ “ಲಿಲ್ಲಿಪುಟ್‌” ಭವ್ಯ ಗೌಡ ಅವರು ಎಲಿಮಿನೇಟ್‌ ಆಗಿದಕ್ಕೆ ಬಿಕ್ಕಿ-ಬಿಕ್ಕಿ ಅತ್ತಿದ್ದರು. ಇನ್ನುಳಿದ ಸ್ಪರ್ಧಿಗಳು ಕೂಡ ಶಾಕ್‌ನಲ್ಲಿ ತ್ರಿವಿಕ್ರಂ ಅವರನ್ನು ಹೊರಗೆ ಕಳುಹಿಸಿದರು. ಅದಲ್ಲದೆ, ಐಶ್ವರ್ಯ ಅವರು ಸೇಫ್‌ ಆಗಿದ್ದು ಇನ್ನೂ ಶಾಕಿಂಗ್‌ ವಿಚಾರ ಎಂದು ಪ್ರೇಕ್ಷಕರು ಹೇಳುತ್ತಾರೆ.


ಕಳೆದ ವಾರ ತಮ್ಮ ತಂಡವನ್ನು ಉಳಿಸಲು ತ್ರಿವಿಕ್ರಂ ಅವರು ತಮ್ಮನ್ನು ತಾವೇ ನಾಮಿನೇಟ್‌ ಮಾಡಿಕೊಂಡಿದ್ದರು. ಈ ಘಟನೆಯು ಸಾಕಷ್ಟು ಚರ್ಚಗೆ ಕಾರಣವಾಗಿದ್ದು, ಇದಕ್ಕೆ ಒಂದು ಟ್ವಿಸ್ಟ್‌ ಇರಬಹುದೇನೋ?
ಬಿಗ್‌ ಬಾಸ್‌ ಮನೆಯಲ್ಲಿ ತ್ರಿವಿಕ್ರಂ ಅವರು ಫಿನಾಲೇ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ಅವರು ತಮ್ಮ ಆಟವನ್ನು ಕೂಡ ಉತ್ತಮವಾಗಿ ಆಡುತ್ತಿದ್ದರು. ಆವರ ಆಟವನ್ನು ಕಂಡು ಅವರಿಗೆ ದೊಡ್ಡ ಅಭಿಮಾನಿ ಬಳಗೆವೇ ಸೃಷ್ಟಿಯಾಗಿದೆ. ಬಹುಷ: ಈ ವಾರ ದೊಡ್ಡ ಮನೆಯಲ್ಲಿ ಎಲಿಮಿನೇಷನ್‌ ಹೈಡ್ರಾಮಾ ನಡೆದಿದೆ. ಅದಕ್ಕಾಗಿ ತ್ರಿವಿಕ್ರಂ ಅವರು ಹೊರ ಬಂದಿರಬಹುದು ಎನ್ನಲಾಗುತ್ತಿದೆ.
ಇದರ ಬಗ್ಗೆ ಕಿಚ್ಚ ಸುದೀಪ ಸಹ ತ್ರಿವಿಕ್ರಂಗೆ ಎಚ್ಚರಿಕೆ ನೀಡಿದ್ದರು. ಆದರೆ, ತ್ರಿವಿಕ್ರಂಗೆ ತಾವು ಇದ್ದೇ ಇರುತ್ತೇನೆ ಎಂದು ವಿಶ್ವಾಸವಿತ್ತು. “ನಿಮಗೆ ನನ್ನ ಜೊತೆ ಬಂದು ಸೇರಲು 5 ನಿಮಿಷ ಕಾಲಾವಕಾಶ ಇದೆʼ ಎಂದು ಸುದೀಪ ಹೇಳಿದ್ದರು. ತ್ರಿವಿಕ್ರಂ ಇದನ್ನು ಪ್ರ್ಯಾಂಕ್‌ ಎಂದುಕೊಂಡಿದ್ದರು. ಆದರೆ ಕಹಾನಿಯಲ್ಲಿ ಟ್ವಿಸ್ಟ್‌ ಇತ್ತು. ಬಿಗ್‌ ಬಾಸ್‌ ಗಾರ್ಡನ್‌ ಏರಿಯಾಗೆ ಬರುತ್ತಿದ್ದಂತೆ ಮುಖ್ಯದ್ವಾರ ಓಪನ್‌ ಆಗಿ, ಅವರು ಹೊರಗೆ ಬಂದರು. ಬಿಗ್‌ ಬಾಸ್‌ ಮನೆಗೆ ತ್ರಿವಿಕ್ರಂ ಮತ್ತೆ ಸೇರಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಯಾವಾಗಲೂ ಎಲಿಮಿನೇಟ್‌ ಆಗಿರುವ ಸ್ಪರ್ಧಿ, ಸುದೀಪ್‌ ಅವರ ಜೊತೆ ವೇದಿಕೆಗೆ ಮಾತುಕತೆಗೆ ಬರುತ್ತಾರೆ, ಆದರೆ ತ್ರಿವಿಕ್ರಂ ಅವರು ವೇದಿಕೆ ಮೇಲೆ ಬರಲಿಲ್ಲ. ಇದೇ ಕಾರಣಕ್ಕೆ ಅವರು ಮತ್ತೆ ಮನೆಗೆ ತೆರಳುತ್ತಾರೆನ್ನುವ ಸುದ್ದಿ ದೊಡ್ಡದಾಗಿ ಕೇಳಿಬರುತ್ತಿದೆ.

ಧನ್ಯಾ ರೆಡ್ಡಿ

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿನಿ

Show More

Leave a Reply

Your email address will not be published. Required fields are marked *

Related Articles

Back to top button