ಮುಡಾ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ..!
ಮುಡಾ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಈಡಿ ಅಧಿಕಾರಿಗಳಿಂದ ಮತ್ತಷ್ಟು ಮಾಹಿತಿ ತಿಳಿದು ಬಂದಿದ್ದು, ಈಡಿ ಅಧಿಕಾರಿಗಳು ತನಿಖೆ ನಡೆಸಿ ಲೋಕಾಯುಕ್ತ ಎಡಿಜಿಪಿ ಗೆ ಒಂದು ಪತ್ರ ಬರೆದು ಇಂಚಿಂಚು ಮಾಹಿತಿ ನೀಡಿದ್ದಾರೆ. ಈ ಮುಡಾ ಪ್ರಕರಣ ಇಷ್ಟಕ್ಕೆ ಸೀಮಿತವಾಗದೆ ಮುಂದುವರೆದ ರೀತಿಯಲ್ಲಿ ದೊಡ್ಡ ಭ್ರಷ್ಟಾಚಾರವೆ ನಡೆದಿದೆ ಎಂದು ತಿಳಿದು ಬಂದಿದೆ. ನಾಗರಾಜ್ ಎಂಬ ವ್ಯಕ್ತಿ ಹೆಸರಿನಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಬರೋಬ್ಬರಿ 100 ಕೋಟಿಯ 53 ನಿವೇಶನಗಳನ್ನ ನೊಂದಣಿಮಾಡಲಾಗಿದೆ. ನಾಗರಾಜ್ ಎಂಬ ವ್ಯಕ್ತಿ ಪಡವಾರಳ್ಳಿಯ ಬಡ ಕುಟುಂಬಕ್ಕೆ ಸೇರಿದ ನಿವಾಸಿಯಾಗಿದ್ದು, ಆತನಿಗೆ ಈ ವಿಷಯ ತಿಳಿದೇ ಇರಲಿಲ್ಲ. ತನ್ನ ಹೆಸರಿನಲ್ಲಿ ಇಷ್ಟು ಮೊತ್ತದ ಆಸ್ತಿ ಇರುವುದನ್ನು ತಿಳಿದು ಆತನೆ ಅಚ್ಚರಿಗೊಳಗಾಗಿದ್ದಾನೆ.
15/6/2024 ರಲ್ಲಿ ಹಿಂದಿನ ಆಯುಕ್ತ ದಿನೇಶ ಕುಮಾರ 53 ನಿವೇಶನಗಳನ್ನ ಸುಳ್ಳು ದಾಖಲೆಯ ಮೇಲೆ ಮಾಡಿದ್ದರು ಎಂದು ಹೇಳಲಾಗಿದ್ದು, ಮಾರಾಗೌಡನ ಹಳ್ಳಿ( ಇಗಿನ ಗೋಕುಲಂ) ಬಳಿ ಸರ್ವೆ ನಂ 57ರಲ್ಲಿ 4 ಎಕರೆ 17 ಗುಂಟೆ, ಸರ್ವೆ ನಂ 77/2 ರಲ್ಲಿ 3 ಎಕರೆ 32 ಗುಂಟೆ, ಒಟ್ಟು 8 ಎಕರೆ 14 ಗುಂಟೆ ಜಾಗವನ್ನು 11/4/1968 ರಲ್ಲಿ ಸ್ವಾಧಿನಪಡಿಸಿಕೊಂಡಿದ್ದು, ವಾರ್ಡ ಸಂಖ್ಯೆ 74 ಮತ್ತು 108 ರಲ್ಲಿ ಆ ವಾರ್ಡ ಸಹ ಖಚಿತವಾಗಿತ್ತು. ಈ ಭೂಮಿ ದೊಡ್ಡ ಉಗ್ರಿ ಹಾಗೂ ಕೆಂಪಮ್ಮನ ಹೆಸರಿನಲ್ಲಿದ್ದು ಇಂತಹ ಭೂಮಿಯನ್ನು ಉಗ್ರಿಯವರ ವಾರಸುದಾರ ನಾಗರಾಜ್ ಎಂದು ಬಿಂಬಿಸಿ ಸುಳ್ಳು ದಾಖಲೆಯನ್ನು ಸೃಷ್ಟಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ಮೇಘಾ ಜಗದೀಶ್
ಆಲ್ಮಾ ಮೀಡಿಯಾ ವಿದ್ಯಾರ್ಥಿನಿ