Alma Corner

19 ವರ್ಷದೊಳಗಿನವರ ಮಹಿಳಾ ಏಷ್ಯಾ ಕ್ರಿಕೆಟ್‌: ಭಾರತದ ಮುಡಿಗೆ ಕಿರೀಟ…!

ಕ್ವಾಲಾಲಂಪುರ(ಪಿಟಿಐ): ಬಿರುಸಿನ ಅರ್ಧಶತಕ ಗಳಿಸಿದ ಗೊಂಗಡಿ ತ್ರಿಷಾ ಅವರ ಬ್ಯಾಟಿಂಗ್‌ ಬಲದಿಂದ ಭಾರತ ತಂಡ 19 ವರ್ಷದೊಳಗಿನವರ ಏಷ್ಯಾ ಮಹಿಳೆಯರ ಟಿ20 ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು. ಭಾನುವಾರ ನಡೆದ ಫೈನಲ್‌ನಲ್ಲಿ ಭಾರತದ ಯುವ ತಂಡವು 41 ರನ್‌ಗಳಿಂದ ಬಾಂಗ್ಲಾದೇಶದ ಎದುರು ಗೆದ್ದಿತು.
ಟಾಸ್‌ ಗೆದ್ದ ಬಾಂಗ್ಲಾ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್‌ ತ್ರಿಶಾ ಅವರ ಅರ್ಧಶತಕ ಬಲದಿಂದ ಭಾರತ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 117 ರನ್‌ ಗಳಿಸಿತು. ತ್ರಿಶಾ ಅವರನ್ನು ಹೊರತುಪಡೆಸಿ ಬೇರೆ ಬ್ಯಾಟರ್ಸ್‌ಗಳಿಂದ ದೊಡ್ಡ ಮೊತ್ತಗಳು ದಾಖಲಾಗಲಿಲ್ಲ.
ನಾಯಕಿ ನಿಕಿ ಪ್ರಸಾದ್‌(12), ಮಿಥಿಲಾ ವಿನೋದ್‌(17), ಹಾಗೂ ಆಯುಷಿ ಶುಕ್ಲಾ (10) ರನ್‌ ಹೀಗೆ ಎರಡಂಕಿಯಲ್ಲಿ ರನ್‌ ಗಳಿಸಿದರು. ಇದರ ನಡುವೆ ತ್ರಿಷಾ ಏಕಾಂಗಿ ಹೋರಾಟ ನಡೆಸಿದರು, ಅವರು 110.63 ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು.


ಬಾಂಗ್ಲಾ ತಂಡದ ಫರ್ಜಾನಾ ಯಾಸ್ಮೀನ್‌ (31 ಕ್ಕೆ 4) ಭಾರತದ ಬ್ಯಾಟಿಂಗ್‌ ಪಡೆಯನ್ನು ಕಾಡಿದರು. ಅಗ್ರಕ್ರಮಾಂಕ ಮತ್ತು ಮಧ್ಯಮಕ್ರಮಾಂಕದ ವಿಕೆಟ್‌ಗಳನ್ನು ಉರುಳಿಸಿದರು. ಅವರಿಗೆ ನಿಶಿತಾ ಅಖ್ತರ್‌ ನಿಶಿ (23 ಕ್ಕೆ 2) ಉತ್ತಮ ಜೊತೆ ನೀಡಿದರು
ಸಾಧಾರಣ ಗುರಿ ಬೆನ್ನಟ್ಟಿದ್ದ ಬಾಂಗ್ಲಾ ತಂಡವು 18.3 ಓವರ್‌ಗಳಲ್ಲಿ 76 ರನ್‌ ಮಾತ್ರ ಗಳಿಸಿತು. ಭಾರತದ ಆಯುಷಿ ಶುಕ್ಲಾ (17 ಕ್ಕೆ 3) ಬಾಂಗ್ಲಾ ತಂಡಕ್ಕೆ ಸವಾಲೊಡ್ಡಿದರು. ಅವರೊಂದಿಗೆ ಸೋನಮ್‌ ಯಾದವ್‌ ಮತ್ತು ಪರುಣಿಕಾ ಸಿಸೊಡಿಯಾ ಅವರೂ ಉತ್ತಮವಾಗಿ ಬೌಲಿಂಗ್‌ ಮಾಡಿ, ತಲಾ ಎರಡು ವಿಕೆಟ್‌ ಗಳಿಸಿದರು.

ಹೇಮ ಎನ್‌.ಜೆ

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿನಿ

Show More

Leave a Reply

Your email address will not be published. Required fields are marked *

Related Articles

Back to top button