ಫೆಬ್ರವರಿ 7ಕ್ಕೆ ತೆರೆಮೇಲೆ ಬರಲಿದೆ “ಅನ್ ಲಾಕ್ ರಾಘವ”
ಬೆಂಗಳೂರು: ಚಿತ್ರ ನಿರ್ಮಾಪಕರಾದ ಮಂಜುನಾಥ್ ದಾಸೇಗೌಡ ಮತ್ತು ಗಿರೀಶ್ ಕುಮಾರ್ ಅವರ ನಿರ್ಮಾಣದಲ್ಲಿ, ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್ ನಡಿ ಮೂಡಿಬಂದಿರುವ ʼಅನ್ ಲಾಕ್ ರಾಘವʼ ಚಿತ್ರದ ಪ್ರತಿಕಾಗೋಷ್ಠಿ ಮಂಗಳವಾರ ಬೆಳಗ್ಗೆ 10.30 ಕ್ಕೆ ರೇಣುಕಾಂಬ ಥಿಯೇಟರ್ನಲ್ಲಿ ನಡೆಯಿತು. ದೀಪಕ್ ಮಧುವನಹಳ್ಳಿ ನಿರ್ದೇಶನದ ಮೊದಲ ಕಮರ್ಷಿಯಲ್ ಸಿನಿಮಾ ಇದಾಗಿದ್ದು. ಈ ಚಿತ್ರದಲ್ಲಿ ನಟಿಸಿರುವ ಮಿಲಿಂದ್ ಗೌತಮ್, ರೆಚೆಲ್ ಡೇವಿಡ್, ಸಾಧುಕೋಕಿಲ, ಅವಿನಾಶ್, ರಾಮೇಶ್ ಭಟ್, ಭೂಮಿ ಶೆಟ್ಟಿ ಸೇರಿದಂತೆ ಹೀಗೆ ದೊಡ್ಡ ತಾರಾಬಳಗವೇ ಇದೆ.
ಪಕ್ಕ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಆಗಿರುವ “ಅನ್ ಲಾಕ್ ರಾಘವ” ಸೀನಿಮಾ ಫೆಬ್ರವರಿ 7, 2025 ರಂದು ಬಿಡುಗಡೆ ಆಗುತ್ತಿದೆ .
ನಾಯಕನಾಗಿ ಮಿಲಿಂದ್ ಅವರ ಚೊಚ್ಚಲ ಸಿನಿಮಾ ಇದಾಗಿದ್ದು, ʼಅನ್ಲಾಕ್ ರಾಘವʼ ಚಿತ್ರದಲ್ಲಿ ವಿಶೇಷ ಪ್ರಾತವನ್ನು ವಹಿಸಿದ್ದಾರೆ. ಲೈಫ್ನಲ್ಲಿ ಸಮಸ್ಯೆಯಿಂದ ಲಾಕ್ ಆದಾಗ ಹೇಗೆ ಅನ್ ಲಾಕ್ ಆಗೋದು ಎಂದು ಸಿನಿಮಾ ತೋರಿಸಿದೆ. ಇನ್ನು ರೆಚೆಲ್ ಡೇವಿಡ್ ಅವರು ರಾಫವನಿಗೆ ಜಾನಕಿ ಆಗಿ ಕಾಣಿಸಿಕೊಂಡಿದ್ದಾರೆ. “ಬೇರೆ ಭಾಷೆಯವರಾಗಿದ್ದರೂ ರೇಚಲ್ ತುಂಬಾ ಚೆನ್ನಾಗಿ ಪಾತ್ರ ನಿಭಾಯಿಸಿದ್ದಾರೆ, ಇದು ಅವರಿಗೆ ಸಿನಿಮಾ ಮೇಲೆ ಇರುವ ಅಸಕ್ತಿ ಹಾಗು ಪ್ರೀತಿ ತೋರಿಸುತ್ತದೆ” ಎಂದು ನಿರ್ದೆಶಕ ಮಧುವನಹಳ್ಳಿ ಹೇಳಿದರು.
ಇನ್ನು ಸಿನಿಮಾದ ವಿಶೇಷತೆ ಎಂದರೆ, ಇಡೀ ಚಿತ್ರವನ್ನು ಹೊರ ರಾಜ್ಯ ಆಥವಾ ಹೊರ ದೇಶಕ್ಕೆ ಹೋಗದೆ, ಕರ್ನಾಟಕದ ಚಿತ್ರದುರ್ಗದಲ್ಲಿ ಚಿತ್ರೀಕರಿಸಿದ್ದಾರೆ. ನಾಗರಹಾವು, ಕೆಂಡಸಂಪಿಗೆ ಇಂತಹ ದೊಡ್ದ ಸಿನಿಮಾ ಚಿತ್ರಿಸಿದ ಜಾಗದಲ್ಲಿ ʼಆನ್ ಲಾಕ್ ರಾಫವʼ ಸಿನಿಮಾ ಶೂಟಿಂಗ್ ಮಾಡಿದ್ದಾರೆ.
“ಚಿತ್ರದುರ್ಗವನ್ನು ಒಂದು ವಿಭಿನ್ನ ರೀತಿಯಲ್ಲಿ ತೋರಿಸಿದ್ದು, ಸಿನಿಮಾ ನೋಡಿದರೆ ಚಿತ್ರದುರ್ಗ ಎಂದು ಊಹಿಸಲೂ ಸಾಧ್ಯವಾಗುವುದಿಲ್ಲ ಅದನ್ನು ವಿಭಿನ್ನ ರೀತಿಯಲ್ಲಿ ಸೆರೆಹಿಡಿಯಲಾಗಿದೆ” ಎಂದು ನಿರ್ದೇಶಕರು ಹೇಳಿದರು.
ರಾಜ್ಯ ಮತ್ತು ರಾಷ್ರ್ಟ ಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯ ಪ್ರಕಾಶ್ ಅವರು ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು ಲಲಿತ್ ಅವರ ಛಾಯಾಗ್ರಾಹಣ, ಅನೂಪ್ ಸೀಳಿನ್ ಅವರ ಸಂಗೀತ, ಅಜಯ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ. ಇನ್ನು ಚಿತ್ರದ ಟೈಟೆಲ್ ವಿಭಿನ್ನವಾಗಿದ್ದು. ಈಗಾಗಲೇ ಚಿತ್ರದ ಹಾಡಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.
ಗೌತಮಿ M
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ