ಬಾಕ್ಸ್ ಆಫೀಸ್‌ನ ʼರೂಲ್ʼ ಮಾಡ್ತಾನಾ ಪುಷ್ಪ…!
ಪುಷ್ಪ-2 ರಿಲೀಸ್‌ಗೂ ಮುನ್ನವೇ ದೇಶದಾದ್ಯಂತ ಭಾರಿ ಸದ್ದು ಮಾಡಿದೆ. ಪ್ಯಾನ್ ಇಂಡಿಯಾ ಸಿನಿಮಾ ಅಗಿರುವ ಪುಷ್ಪ-2 , 5 ಭಾಷೆಗಳಲ್ಲಿ ಡಿಸೆಂಬರ್ 5 ರಂದು ಬಿಡುಗಡೆಯಾಗುತ್ತಿದೆ. ಸುಕುಮಾರ್ ನಿದೇ೯ಶನದಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ಅಲ್ಲು ಅಜು೯ನ್, ರಶ್ಮಿಕಾ ಮಂದಣ್ಣ, ಶ್ರೀಲೀಲಾ ಹಾಗೂ ಫಹಾದ್ ಫಾಸಿಲ್ ನಟಿಸಿದ್ದು, ದೊಡ್ಡ ತಾರಾಗಣವೇ ಇದೆ.
ಈ ಹಿಂದೆ ತೆರೆಕಂಡ ಪುಷ್ಪ-1 ಚಿತ್ರಮಂದಿರ ಹಾಗೂ ಓಟಿಟಿಯಲ್ಲಿ 365 ಕೋಟಿ ಗಳಿಸಿ ದಾಖಲೆ ಮಾಡಿತ್ತು. ಅದರೆ ಪುಷ್ಪ-2 ಪ್ರಿ-ರೀಲಿಸ್ ಈವೆಂಟ್‌ನಲ್ಲಿ ಈಗಾಗಲೇ 125 ಕೋಟಿ ಹಣಗಳಿಸಿದ್ದು ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸುವ ನಿರೀಕ್ಷೆ ಹುಟ್ಟಿಸಿದೆ. ಪುಷ್ಪ-2 ಸಿನಿಮಾದ ಹಾಡುಗಳು ಸಿನಿರಸಿಕರನ್ನು ಈಗಾಗಲೇ ರಂಜಿಸಿದ್ದು, ಅಲ್ಲು ಅಜು೯ನ್ ಅವರ ಪುಷ್ಪರಾಜ್ ಪಾತ್ರದ ಮುಂದುವರೆದ ಭಾಗಕ್ಕಾಗಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಚಿತ್ರವು ದೇಶಾದ್ಯಂತ ಅಲ್ಲದೇ, ವಿದೇಶದಲ್ಲೂ ಪ್ರದಶ೯ನಗೊಳ್ಳಲು ಸಜ್ಜಾಗಿದೆ.
ಗೌತಮಿ ಎಮ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ