ಸ್ಯಾಂಡಲ್‌ವುಡ್ ಏಳಿಗೆಗಾಗಿ ನಾಗಾರಾಧನೆ: ಹಿರಿಯ ನಟಿ ಜ್ಯೋತಿ ಮೈಮೇಲೆ ಬಂದ ನಾಗ ದೇವರು!
ಬೆಂಗಳೂರು: ಇಂದು ನಡೆದ ಸ್ಯಾಂಡಲ್‌ವುಡ್ ಏಳಿಗೆಯ ವಿಶೇಷ ಪೂಜೆಯಲ್ಲಿ ಕುತೂಹಲಕಾರಿ ಘಟನೆ ಜರುಗಿದ್ದು, ಹಿರಿಯ ನಟಿ ಜ್ಯೋತಿ ಭಾವೋದ್ವೇಗಕ್ಕೆ ಒಳಗಾಗಿದ್ದಾರು. ಕರ್ನಾಟಕ ಕಲಾವಿದರ ಸಂಘದಲ್ಲಿ ನಡೆದ ನಾಗಾರಾಧನೆ ವೇಳೆ ಈ ಘಟನೆ ನಡೆದಿದ್ದು, ನೆರೆದವರು ಅಚ್ಚರಿ ವ್ಯಕ್ತಪಡಿಸಿದರು.
ನಾಗಾರಾಧನೆ ವೇಳೆ ನಟಿ ಜ್ಯೋತಿ ಅವರು ದೇವರು ಮೈಮೇಲೆ ಬಂದ ಅನುಭವವನ್ನು ಹೊಂದಿದ್ದು, ತಕ್ಷಣವೇ ಅವರಿಗೆ ನೀರು ಕೊಟ್ಟು ಸಮಾಧಾನಪಡಿಸಿದರು. ಈ ಘಟನೆಗೆ ಪ್ರತಿಕ್ರಿಯೆ ನೀಡಿದ ನಟಿ ಜ್ಯೋತಿ, “ಈ ಹಿಂದೆ ಹಲವಾರು ಬಾರಿ ನನಗೆ ನಾಗದೇವರು ಮೈಮೇಲೆ ಬಂದ ಅನುಭವವಿದೆ. ದೇವಿಯ ಆರಾಧನೆಯ ವೇಳೆ ಶಕ್ತಿ ನನ್ನ ಮೈಮೇಲೆ ಬರುತ್ತದೆ. ಇದು ದೇವರ ಅನುಗ್ರಹದ ಸಂಕೇತವಾಗಿದೆ,” ಎಂದು ಹೇಳಿದರು.
“ಈ ದಿನವೂ, ನಾಗಾರಾಧನೆಯ ಸಮಯದಲ್ಲಿ ದೇವರು ನನ್ನ ಮೈಮೇಲೆ ಬಂದರು. ಈ ಪೂಜೆಯನ್ನು ಸ್ವೀಕರಿಸಿರುವುದರಿಂದ ನಮ್ಮ ಇಂಡಸ್ಟ್ರಿಗೆ ಯಶಸ್ಸು ದೊರೆಯಲಿದೆ,” ಎಂದು ಅವರು ಭಾವೋದ್ವೇಗದಿಂದ ವಿವರಿಸಿದರು.
ರಾಕ್‌ಲೈನ್ ವೆಂಕಟೇಶ್ ನೇತೃತ್ವದಲ್ಲಿ ನಡೆದ ಈ ವಿಶೇಷ ಪೂಜೆಯಲ್ಲಿ, ಹಿರಿಯ ನಟಿ ಗಿರಿಜಾ ಲೋಕೇಶ್, ಜಗ್ಗೇಶ್, ಶರಣ್, ಲವ್ಲಿ ಸ್ಟಾರ್ ಪ್ರೇಮ್, ನಟಿ ರಾಗಿಣಿ ದ್ವಿವೇದಿ, ಅಭಿಷೇಕ್ ಅಂಬರೀಶ್, ಗುರುಕಿರಣ್, ಪದ್ಮಜಾ ರಾವ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.