ಸಾಂಸ್ಕೃತಿಕ ವೈಭವದ ದಸರಾ
ದಸರಾ ಎಂದ ಕೂಡಲೆ ನಮ್ಮ ಕಣ್ಣಮುಂದೆ ಬರುವುದು ವಿವಿಧ ಸಾಂಸ್ಕೃತಿಕ ಕಲೆ, ನೃತ್ಯ, ಜಂಬೂ ಸವಾರಿ , ದೀಪಗಳ ಮೆರವಣಿಗೆ, ಕಲೆಯ ಪ್ರದರ್ಶನ ಹೀಗೆ ಮುಂತಾದವು. ನಮ್ಮ ಸಂಸ್ಕೃತಿ ,ನಮ್ಮ ಆಚಾರ ವಿಚಾರಗಳನ್ನು ಪ್ರತಿಬಿಂಬಿಸುವ ನಾಡ ಹಬ್ಬ ಅದು ದಸರಾ .ನಮ್ಮ ಸಂಸ್ಕೃತಿಯನ್ನು ವೈಭವೀಕರಿಸುವಂತಹ ಈ ನಾಡ ಹಬ್ಬ ಜಗತ್ ಪ್ರಸಿದ್ದಿ. ಪ್ರತಿವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ದೇಶ ವಿದೇಶಗಳಿಂದ ನಮ್ಮ ಸಂಸ್ಕೃತಿಯನ್ನು ವೈಭವೀಕರಿಸುವಂತಹ ದಸರಾವನ್ನು ನೊಡಲು ಜನ ಸಾಗರೋಪಾದಿಯಲ್ಲಿ ಭಾಗವಹಿಸುತ್ತಾರೆ.
ದಸರಾ ಎನ್ನುವ ಪದ ಸಂಸ್ಕೃತ ದಿಂದ ಬಂದಿದ್ದು ,ಸಂಸ್ಕೃತ ಪದಗಳಾದ ದಶ=10, ಹತ=ಸೋಲಿಸುವುದು ಇದೆ ದಶಹತ ಆಗಿ ʼದಸರಾʼ ಎಂಬ ಹೆಸರನ್ನು ಪಡೆದುಕೊಂಡಿದೆ ಎಂದು ಹೇಳಲಾಗುತ್ತದೆ. ಇದರ ಪ್ರಕಾರ ಹಿಂದು ಚಂದ್ರಮಾನ ಕ್ಯಾಲೆಂಡರ 10 ನೇ ದಿನ ಕೆಡುಕಿನ ವಿರುದ್ದ ಒಳಿತು ಜಯ ಸಾಧಿಸಿದ ದಿನ ಎಂದು ಹೇಳಲಾಗುತ್ತದೆ.
ಮಹಾಭಾರತದಲ್ಲಿ ಹಾಗೆ ರಾಮಾಯಣದಲ್ಲಿಯೂ ವಿಜಯ ದಶಮಿಗೆ ಪ್ರಮುಖ ಪಾತ್ರವಿದೆ. ಮಹಾಭಾರತದಲ್ಲಿ ಪಾಂಡವರು ತಮ್ಮ ಅಙ್ಙಾತವಾಸದ ಅಂತ್ಯದಲ್ಲಿ ಬನ್ನಿ ಮರಕ್ಕೆ ಕಟ್ಟಲಾದಂತಹ ತಮ್ಮ ಶಸ್ತ್ರಾಸ್ತ್ರಗಳನ್ನು ತೆಗೆದು ಪೂಜೆ ಮಾಡಿ ಯುದ್ದ ಆರಂಭಿಸಿದ್ದರು. ಹಾಗೆ ಆ ಯುದ್ದದಲ್ಲಿ ವಿಜಯವನ್ನು ಸಾಧಿಸಿದ್ದರು ಎಂದು ಹೇಳಲಾಗುತ್ತದೆ. ರಾಮಾಯಣ ಪ್ರಕಾರ ಈ ವಿಜಯ ದಶಮಿ ದಿನದಂದೆ ರಾವಣನ ವಿರುದ್ದ ರಾಮ ವಿಜಯವನ್ನು ಸಾಧಿಸಿದ್ದರು ಎಂದು ಹೇಳಲಾಗುತ್ತದೆ. ಹಾಗಾಗಿ ವಿಜಯ ದಶಮಿಯನ್ನು ವಿಜಯದ ದಿನ ಎಂದು ಹೇಳಲಾಗುತ್ತದೆ.
ಇನ್ನು ಮೈಸೂರು ದಸರಾಕ್ಕೆ ಬೇರೆಯದೆ ಹಿನ್ನಲೆಯನ್ನು ಕೊಡಲಾಗುತ್ತದೆ. ಆದರೆ ಇದು ಕೂಡ ಕತ್ತಲೆಯ ವಿರುದ್ದ ಬೆಳಕಿನ ಗೆಲುವು. ಮಹಿಶಾಸುರ ಎಂಬ ರಾಕ್ಷಸನನ್ನು ತಾಯಿ ಚಾಮುಂಡೇಶ್ವರಿ ಹತೈ ಮಾಡಿದ ದಿನ ಎಂದು ಸಹ ನಂಬಿಕೆ ಇದೆ. ಹಾಗಾಗಿ ಇದನ್ನು ವಿಜಯ ದಶಮಿ ಎಂದು ಹೆಸರಿಸಲಾಗುತ್ತದೆ. ಈ ಬಾರಿಯ ಮೈಸೂರು ದಸರಾ ೪೧೪ನೇ ಮೈಸೂರು ದಸರಾ. ಆದರೆ ನಮ್ಮ ಕರ್ನಾಟಕದ ಮಹೋತ್ಸವ ಆರಂಭದಿಂದಲೂ ಮೈಸೂರು ದಸರಾ ಎಂದು ಕರೆಸಿಕೊಳ್ಳುತ್ತಿರಲ್ಲಿಲ್ಲ. ಇದರ ಮೂಲ ೧೪ ನೇ ಶತಮಾನದ ಸಾಮ್ರಾಜ್ಯಕ್ಕೆ ಸಂಪರ್ಕವನ್ನು ಹೊಂದಿದೆ. ಹಂಪಿಯ ಹಜಾರ್ ರಾಮ್ ದೇವಸ್ಥಾನದ ಕೆತ್ತನೆಗಳಲ್ಲಿ ಇದರ ಉಲ್ಲೇಖ ಸಿಗುತ್ತದೆ. ವಿಜಯನಗರದ ಸಾಮ್ರಾಜ್ಯದ ಸಂಕೇತವಾಗಿದ್ದ ಮಹಾದಶಮಿ ದಕ್ಕನ್ನರ ಆಕ್ರಮಣದಿಂದ ವಿಜಯನಗರ ಸಾಮ್ರಾಜ್ಯ ಪತನವಾಯಿತು. ಪತನವಾದ ನಂತರದಲ್ಲಿ ವಿಜಯ ದಶಮಿ ಮುಂದುವರೆಯಲೇ ಇಲ್ಲ.
ಆದರೆ ಕರ್ನಾಟಕದ ದಕ್ಷಿಣ ಭಾಗದಲ್ಲಿ ಅಳಿದುಳಿದು ಇದ್ದಂತಹ ಸಣ್ಣಪುಟ್ಟ ರಾಜ್ಯಗಳನ್ನು ಸೇರಿಸಿ ಮೈಸೂರಿನ ಒಡೆಯರು ಹೊಸ ರಾಜ್ಯವನ್ನು ನಿರ್ಮಾಣ ಮಾಡಿದರು. ಜೋತೆಗೆ ಮಹಾನವಮಿಯನ್ನು ಮೈಸೂರು ದಸರಾ ಆಗಿ ತಮ್ಮ ರಾಜ್ಯದಲ್ಲಿ ಮುಂದುವರೆಸಿದರು.
೧೬೧೦ ರಲ್ಲಿ ಶ್ರೀ ರಾಜ ಒಡೆಯರು ಶ್ರೀರಂಗಪಟ್ಟಣದಲ್ಲಿ ಮೊದಲ ದಸರಾ ಮಹೋತ್ಸವವನ್ನು ಆರಂಭವನ್ನು ಮಾಡಿದರು. ಅಂದು ಶುರುವಾದ ದಸರಾ ಇಂದಿಗೂ ನಡೆದುಕೊಂಡು ಬರುತ್ತಿದೆ. ಆದರೆ ಇಗಾ ಸ್ವಾತಂತ್ರ್ಯ ಬಂದು ರಾಜಪ್ರಭುತ್ವ ಬಂದಿದೆ. ೧೯೭೧ ರಲ್ಲಿ ರಾಜ್ಯ ಸರ್ಕಾರ ರಾಜರಿಗಿದ್ದ ವಿಶೇಷ ಹಕ್ಕನ್ನು ಮರು ಪಡೆದುಕೊಂಡಿತ್ತು. ಇದಾದ ನಂತರ ದಸರಾವನ್ನು ರಾಜ್ಯ ಸರ್ಕಾರ ಆಚರಿಸಿಕೊಂಡು ಬರುತ್ತಿದೆ.
ದಸರಾ ಸಂಧರ್ಬದಲ್ಲಿ ಎಲ್ಲರ ಗಮನವನ್ನು ಸೆಳೆಯುವುದು ಜಂಬು ಸವಾರಿ. ದಸರಾ ಕಡೆಯ ದಿನ ವಿಶ್ವವಿಖ್ಯಾತ ಜಂಬು ಸವಾರಿ ಮೆರವಣಿಗೆ ನಡೆಯುತ್ತದೆ. ಅರಮನೆ ಮುಂಭಾಗದಿಂದ ಹೊರಡುವ ಗಜ ಪಡೆಯಲ್ಲಿ ಚಿನ್ನದ ಅಂಬಾರಿಯನ್ನು ಹೋರುವ ಆನೆ ಸೇರಿ ಒಟ್ಟು ೧೪ ಆನೆಗಳಿರುತ್ತವೆ.ಅವುಗಳಿಗೆ ಅದ್ದೂರಿ ಅಲಂಕಾರ ಮಾಡಲಾಗಿರುತ್ತದೆ. ಆನೆ ಮೇಲಿರುವ ಚಿನ್ನದ ಅಂಬಾರಿಯ ತೂಕ ೭೫೦ಕೆಜಿ . ಈ ಅಂಬಾರಿಯಲ್ಲಿ ಚಾಮುಂಡೇಶ್ವರಿ ವಿಗ್ರಹವನ್ನು ಇಡಲಾಗುತ್ತದೆ. ಅರಮನೆ ಮುಂಭಾಗದಿಂದ ಹೊರಡುವ ಜಂಬು ಸವಾರಿ ಸುಮಾರು ೪.೫ ಕೀಲೊ ದೂರ ಸಾಗಿ ಬನ್ನಿ ಮಂಟಪದ ಬಳಿ ಮುಕ್ತಾಯವಾಗುತ್ತದೆ. ಬನ್ನಿ ಮಂಟಪಕ್ಕೆ ಈ ಸಂದರ್ಭದಲ್ಲಿ ವಿಶೇಷ ಗೌರವವನ್ನು ನೀಡಲಾಗುತ್ತದೆ. ನಂತರ ಬನ್ನಿ ಮಂಟಪದಲ್ಲಿ ಪಂಚ ಕವಾಯತ್ ನಡೆಯುತ್ತದೆ. ಇದು ಜಂಬು ಸವಾರಿಯ ಎರಡನೆ ಆಕರ್ಷಕ ಚಟುವಟಿಕೆ ಆಗಿದೆ. ಇದಾದ ನಂತರ ಕಲೆ, ಸಾಹಿತ್ಯ,ನೃತ್ಯ, ಬಗೆಬಗೆಯ ಝೇಂಕಾರಗಳು ಹೀಗೆ ವಿವಿಧ ಬಗೆಯ ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಹೀಗೆ ಜಗತ್ ವಿಖ್ಯಾತಿಯಾದಂತಹ ಮೈಸೂರು ದಸರಾ ಪ್ರತಿ ವರ್ಷ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಪ್ರಪಂಚದ ಕಣ್ ಮನವನ್ನು ಸೆಳೆಯುತ್ತಿದೆ.
ಮೇಘಾ J M
ಆಲ್ಮಾ ಮೀಡಿಯಾ ವಿದ್ಯಾರ್ಥಿನಿ