ಅಮೆರಿಕಾದ ವಶವಾಗುತ್ತಾ ಗಾಜಾ? ಪಾಲೆಸ್ಟೆನಿಗರಿಗಿಲ್ವಾ ಜಾಗ..!?

ಟ್ರಂಪ್ ಅಮೇರಿಕಾದಲ್ಲಿ ಅಧಿಕಾರದ ಗದ್ದುಗೆಯನ್ನು ಏರಿದ ನಂತರ ಪ್ರಪಂಚದಲ್ಲಿ ಸಾಕಷ್ಟು ಬದಲಾವಣೆಗಳು ಆಗ್ತಾ ಇದೆ. ಟ್ರಂಪ್ ಅಧಿಕಾರವಹಿಸಿಕೊಂಡ ಬೆನ್ನಲ್ಲೇ ಅಮೇರಿಕದಲ್ಲಿರುವಂತಹ ವಲಸಿಗರನ್ನು ಬೇಡಿ ಹಾಕಿ ಅವರವರ ದೇಶಗಳಿಗೆ ದಬ್ಬಲಾಯಿತು. ಈಗ ದೊಡ್ಡಣ್ಣನ ಕಣ್ಣು ಗಾಜಾದ ಮೇಲೆ ಬಿದ್ದಿದೆ. ಗಾಜಾವನ್ನ ವಶಕ್ಕೆ ಪಡೆದು ಅಲ್ಲಿಯ ಜನರನ್ನ ಬೇರೆ ಕಡೆ ವರ್ಗಾಯಿಸಿ ಗಾಜಾವನ್ನು ಪುನರ್‌ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಅರಬ್ ದೇಶಗಳಿಗೆ ಹಾಗೂ ಪ್ಯಾಲಿಸ್ಟೆನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಗ್ರೀನ್ ಲ್ಯಾಂಡ್ ಹಾಗೂ ಪನಾಮವನ್ನ ವಶಪಡಿಸಿಕೊಂಡಿರುವಂತಹ ಅಮೇರಿಕಾದ ಕಣ್ಣು ಪುಟ್ಟ ಗಾಜಾದ ಮೇಲೆ ಬಿದ್ದಿದೆ. ಬಲವಂತದಿಂದ ಆದರೂ ಸರಿಯೇ ಅವರನ್ನು ಹೊರದಬ್ಬಿ ತನ್ನ ಸುಪರ್ಧಿಗೆ ಗಾಜಾವನ್ನ ತೆಗೆದುಕೊಳ್ಳಬೇಕು ಎಂಬ ದಿಟ್ಟತನಕ್ಕೆ ಅಮೇರಿಕ ನಿಂತಿದೆ. ಇಸ್ರೇಲ್ ಮತ್ತು ಗಾಜಾದ ನಡುವೆ ಯುದ್ದ ಆದ ಮೇಲೆ ಗಾಜಾದ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಅಲ್ಲಿ ಬಾಂಬ್‌ಗಳ ಅವಶೇಷಗಳು, ಬಿದ್ದ ಕಟ್ಟಡಗಳು, ಶಸ್ತ್ರಾಸ್ರಗಳನ್ನ ಬಿಟ್ಟು ಬೇರೆ ಏನು ಕಾಣುತ್ತಿಲ್ಲ. ಬಾಂಬ್ ದಾಳಿಗಳಿಂದ ಗಾಜಾ ಸುಧಾರಿಸಿಕೊಳ್ಳಲು ಸುಮಾರು ವರ್ಷಗಳೆ ಬೇಕು. ಆದರೆ ಇಗ ಟ್ರಂಪ್‌ನ ಈ ನಿರ್ಧಾರ ಗಾಜಾದ ಪ್ರಜೆಗಳಲ್ಲಿ ಆತಂಕವನ್ನ ಹೆಚ್ಚಿಸಿದೆ.

ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ತಮ್ಮ ಹಳೆಯ ಮಿತ್ರರನ್ನು ಕರೆದು ಮಾತನಾಡುವುದಕ್ಕೆ ಶುರು ಮಾಡಿದ್ದು ಅದರ ಭಾಗವಾಗಿ ಮೊದಲಿಗೆ ಇಸ್ರೇಲ್ ಅಧ್ಯಕ್ಷ ನೇತನ್ಯ ಯ್ಯಾಹು ಅವರನ್ನು ಭೇಟಿ ಮಾಡಿದ್ದಾರೆ. ಅವರ ಜೊತೆ ಕೆಲ ಹೊತ್ತು ಮಾತನಾಡಿ ಬಳಿಕ ಟ್ರಂಪ್ ಮತ್ತು ಇಸ್ರೇಲ್ ಅಧ್ಯಕ್ಷರ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿ ಗಾಜಾವನ್ನು ವಶಕ್ಕೆ ಪಡೆಯುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಗಾಜಾವನ್ನ ವಶಕ್ಕೆ ಪಡೆದರೆ ಇಸ್ರೇಲ್‌ಗಿಂತ ಅಮೆರಿಕಾಗೆ ಹೆಚ್ಚಿನ ಲಾಭ ಇದೆ. ಇಸ್ರೇಲ್‌ನ ಮುಂದಕ್ಕೆ ಬಿಟ್ಟು ಅಮೇರಿಕಾ ಗಾಜಾವನ್ನ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತಿದೆ. ಆದರೆ ಜಾಗಾವನ್ನ ಅಮೆರಿಕಾ ಹಿಡಿತಕ್ಕೆ ತೆಗೆದುಕೊಳ್ಳಲು ಹಮಾಸ್ ಸುಲಭಕ್ಕೆ ಬಿಡುವ ಸಾಧ್ಯತೆಯಂತು ಇಲ್ಲ. ಯಾಕೆಂದರೆ ಹಮಾಸ್‌ನ ಅಸ್ತಿತ್ವ ಇರುವುದೇ ಹಮಾಸ್‌ನಲ್ಲಿ. ಜಾಗಾದ ಆಸ್ಪತ್ರೆ, ಶಾಲೆ, ಕಛೇರಿಗಳ ಭೂಗತ ಜಾಗಗಳಲ್ಲಿ ಬೇರೂರಿಬಿಟ್ಟಿದೆ.
ವೆಸ್ಟ್ ಬ್ಯಾಂಕ್‌ನ ಒಂದು ಭಾಗವಾಗಿರುವಂತಹ ಗಾಜಾ ಇಗ ಹಮಾಸ್‌ನ ಕಪಿಮುಷ್ಠಿಯಲ್ಲಿದೆ. ಅಮೆರಿಕ ಮತ್ತು ಇಸ್ರೇಲ್ ಹಮಾಸ್ ಸಂಘಟನೆಯನ್ನು ಉಗ್ರಗಾಮಿ ಸಂಘಟನೆ ಎಂದು ಕರೆದರೆ, ಇಸ್ಲಾಮಿಕ್ ದೇಶಗಳು ಅವರನ್ನು ಹೋರಾಟಗಾರರು ಎಂದು ಭಾವಿಸುತ್ತಾರೆ. ಹಮಾಸ್‌ನನ್ನ ಬುಡ ಸಮೇತವಾಗಿ ಕಿತ್ತು ಗಾಜಾವನ್ನ ಪುನರ್ ನಿರ್ಮಾಣ ಮಾಡಿ ತನ್ನ ಸುಪರ್ಧಿಗೆ ತೆಗೆದುಕೊಳ್ಳಬೇಕೆಂಬುದು ಅಮೆರಿಕಾದ ಯೋಚನೆ. ಆದರೆ ಅಮೆರಿಕ ಗಾಜಾವನ್ನ ವಶಪಡಿಸಿಕೊಂಡರೆ ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಯುದ್ಧ ಸಂಭವಿಸುವ ಸಾಧ್ಯತೆ ಸಹ ಇದೆ. ಇಗಾಗಲೇ ಒಂದು ಬಾರಿ ಇಸ್ರೇಲ್ ಮತ್ತು ಗಾಜಾದ ನಡುವ ಯುದ್ದ ಸಂಭವಿಸಿ ಸಾಕಷ್ಟು ನಷ್ಟಆಗಿದೆ.ಲಕ್ಷಾಂತರ ಮಂದಿ ಸಾವನಪ್ಪಿದ್ದಾರೆ. ಇಗ ಮತ್ತೊಮ್ಮೆ ಯುದ್ದ ಆದರೆ ಇಸ್ರೇಲ್, ಗಾಜಾ ಹಾಗೂ ಪ್ರಪಂಚದ ಮೇಲೂ ಪ್ರಭಾವ ಬೀರುವ ಸಂಭವ ಇದೆ.
ಅಮೇರಿಕದ ಈ ನಡೆ ಹತ್ತಾರು ಪ್ರಶ್ನೆಗಳನ್ನ ಹುಟ್ಟಿ ಹಾಕ್ತಾ ಇದೆ. ಗಾಜಾದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಅಮೇರಿಕ ಗಾಜಾವನ್ನ ತನ್ನ ತೆಕ್ಕೆಗೆ ತೆಗೆದುಕೊಂಡರೆ ಈ 20 ಲಕ್ಷ ನಿವಾಸಿಗಳ ಕಥೆ ಏನು? ಗಾಜಾದ ಮೂಲ ನಿವಾಸಿಗಳನ್ನು ಈಜಿಪ್ಟ್ ಅಥವಾ ಜೋರ್ಡನ್‌ಗೆ ಕಳುಹಿಸಬೇಕು ಎಂದು ಅಮೇರಿಕ ನಿರ್ಧರಿಸುತ್ತಿದೆ. ಆದರೆ ತಮ್ಮ ಮೂಲ ಸ್ಥಳವನ್ನು ಬಿಟ್ಟು ಹೋಗೋದಕ್ಕೆ ಗಾಜಾ ಪ್ರಜೆಗಳು ಸಿದ್ದರಿದ್ದಾರಾ?
ಒಂದು ವೇಳೆ ಅಮೇರಿಕ ಗಾಜಾವನ್ನ ಪುನರ್ ನಿರ್ಮಾಣ ಮಾಡಿದ ನಂತರ ತಾನೇ ಅಧಿಕಾರವನ್ನು ನಡೆಸುತ್ತಾ ಅಥವಾ ಅರಬ್ ದೇಶಗಳಿಗೆ ಉಸ್ತುವಾರಿಯನ್ನು ವಹಿಸುತ್ತಾ ಅನ್ನುವಂತ ಚರ್ಚೆಗಳು ಆರಂಭವಾಗಿದೆ. ಆದರೆ ಗಾಜಾವನ್ನ ವಶಪಡಿಸಿಕೊಳ್ಳುವುದರಿಂದ ಅಮೇರಿಕಗೆ ಲಾಭ ಅಂತೂ ಇದ್ದೇ ಇದೆ. ಅಮೆರಿಕಾ ಮಧ್ಯಪ್ರಾಚ್ಯದಲ್ಲಿ ತನ್ನ ಅಸ್ತಿತ್ವವನ್ನ ಸಾಧಿಸೋದಿಕ್ಕೆ ಸುಲಭವಾಗುತ್ತದೆ. ಈಗ ಭಾರತ ಮತ್ತು ಮಧ್ಯಪ್ರಾಚ್ಯ ಹಾಗೂ ಯುರೋಪ್ ಮಧ್ಯ ಎಕನಾಮಿಕ್ ಕಾರಿಡಾರ್ ಪ್ರಸ್ತಾವನೆ ಇದೆ. ಅದರ ಮುಖ್ಯ ಅಂಶ ಅಂದ್ರೆ ಮೆಡಿಟರೇನಿಯನ್ ಸಮುದ್ರದ ಪ್ರಮುಖ ಬಂದರು ಎನಿಸಿಕೊಂಡಿರುವಂತದ್ದು ಹೈಪಾ ಇದು ಗಾಜಾದ ಕಡಲ ತೀರದಲ್ಲಿದೆ. ಭಾರತದಿಂದ ಯುರೋಪನ್ನ ತಲುಪುವುದಕ್ಕೆ ಸೌದಿ ಅರೇಬಿಯಾ, ಜೋರ್ಡಾನ್ ಮೂಲಕ ಬರುವ ಸರಕು ಸಾಮಗ್ರಿಗಳನ್ನು ಇಸ್ರೇಲಿಗೆ ಬಂದು ಇಸ್ರೇಲ್ ಹೈಪಾ ಬಂದರ್‌ನ ಮೂಲಕ ಮೆಡಿಟೇರಿಯನ್ ಸಮುದ್ರವನ್ನು ಹಾದು ಯುರೋಪನ್ನ ತಲುಪುತ್ತದೆ ಹೀಗಾಗಿ ಈ ಹೈಪಾ ಬಂದರಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತಿದೆ.
ಈಗ ಒಂದು ವೇಳೆ ಹಮಾಸ್‌ನಿಂದ ಗಾಜಾ ಮುಕ್ತವಾಗಿ ಅಮೆರಿಕ ಪಾಲಾದ್ರೆ ಗಾಜಾದ ಗಡಿಯಲ್ಲಿರುವಂತಹ ಕರಾವಳಿ ತೀರ ಈ ಹೊಸ ಯೋಜನೆಗೆ ಬಳಕೆಯಾಗುವ ಸಾಧ್ಯತೆ ಇದೆ. ಹಾಗೇ ಮಧ್ಯಪ್ರಾಚ್ಯದಲ್ಲಿ ಹಿಡಿತವನ್ನ ಸಾಧಿಸಲಾಗುತ್ತದೆ. ಹಾಗೆ ಅಮೇರಿಕ ತನ್ನ ಸೇನಾ ನೆಲೆಯನ್ನ ಸಹ ಮಾಡಿಕೊಳ್ಳುವುದಕ್ಕೆ ಅವಕಾಶ ಸಿಗುತ್ತದೆ. ಮತ್ತು ಮೆಡಿಟೇರಿಯನ್ ಸಮುದ್ರದ ಮೇಲೆ ಸಂಪೂರ್ಣ ಹಿಡಿತ ಅಮೆರಿಕಾಗೆ ಸಿಗುತ್ತದೆ. ಇದೆಲ್ಲದನ್ನ ಗಮನದಲ್ಲಿಟ್ಟುಕೊಂಡು ಟ್ರಂಪ್ ಗಾಜಾವನ್ನ ಪುನರ್ ನಿರ್ಮಾಣ ಮಾಡುವ ನಿರ್ಧಾರ ತೆಗೆದುಕೊಂಡ್ರ ಅನ್ನುವಂತಹ ಅನುಮಾನ ಮೂಡುತ್ತಿದೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂದು ನಿರೀಕ್ಷಿಸಬೇಕಾಗಿದೆ.
ಮೇಘಾ ಜಗದೀಶ್
ಆಲ್ಮಾ ಮೀಡಿಯಾ ವಿದ್ಯಾರ್ಥಿನಿ