ಟ್ರಂಪ್ ಆಡಳಿತದ ವಿರುದ್ದ ಭುಗಿಲೆದ್ದ ಜನ ಆಕ್ರೋಶ


ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಎಲಾನ್ ಮಸ್ಕ್ ಅವರ ಆಡಳಿತ ನೀತಿ ವಿರುದ್ದ ತಿರುಗಿ ಬಿದ್ದಿರುವ ದೇಶದ ಜನತೆ ಪ್ರತಿಭಟನೆಗೆ ಇಳಿದಿದ್ದಾರೆ. ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ದೇಶವ್ಯಾಪಿ ಪ್ರತಿಭಟನೆಯ ಬಿಸಿ ಎದುರಿಸುತ್ತಿದ್ದಾರೆ. ವಾಷಿಂಗ್ಟನ್ ಸೇರಿದಂತೆ 50 ರಾಜ್ಯಗಳಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಿದ ಕ್ರಮ ಖಂಡಿಸಿದರು. ʼʼ ಟ್ರಂಪ್ ಹಾಗೂ ಮಸ್ಕ್ ಆಡಳಿತ ನೀತಿಗಳು ದೇಶವನ್ನು ಸರ್ವನಾಶ ಮಾಡುತ್ತಿವೆ. ಪ್ರತಿಸುಂಕ ನೀತಿಯಿಂದ ವ್ಯಾಪಾರ , ಉದ್ಯಮವಲಯ ನಾಶವಾಗಲಿದೆ.ʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಗರಿಕ ಹಕ್ಕುಗಳ ಸಂಘಟನೆಗಳು , ಕಾರ್ಮಿಕ ಸಂಘಟನೆಗಳು , ವಕೀಲರು ಮತ್ತು ಚುನಾವಣಾ ಕಾರ್ಯಕರ್ತರು ಸೇರಿದಂತೆ 150 ಕ್ಕೂ ಹೆಚ್ಚು ಗುಂಪುಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ಅಮೆರಿಕದಾದ್ಯಂತ ನೂರಾರು ನಗರಗಳಲ್ಲಿ ಸಾವಿರಾರು ಪ್ರತಿಭಟನಾಕಾರರು ಮಿಡ್ಟೌನ್ ಮ್ಯಾನ್ಹ್ಯಾಟನ್ನಿಂದ ಅಲಾಸ್ಕಾದ ಆಂಕಾರೇಜ್ವರೆಗೆ ಟ್ರಂಪ್ ಮತ್ತು ಎಲಾನ್ ಮಸ್ಕ್ ಅವರ ವಜಾಗೂಳಿಸುವಿಕೆ, ಆರ್ಥಿಕತೆ, ವಲಸೆ ಮತ್ತು ಮಾನವ ಹಕ್ಕುಗಳ ನೀತಿಗಳ ವಿರೋಧ ಪ್ರತಿಭಟಿಸಿದರು.

ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಾಗಿನಿಂದ ಎಲಾನ್ ಮಸ್ಕ್ ನೇತೃತ್ವದ ಅಮೆರಿಕ ಸರ್ಕಾರದ ದಕ್ಷತೆ ವಿಭಾಗವು ವಜಾಗೂಳಿಸುವಲ್ಲಿ ತೊಡಗಿದೆ. ಕೆಲಸದಿಂದ ತೆಗೆದಿಹಾಕುವಿಕೆ, ಸಾಮಾಜಿಕ ಭದ್ರತಾ ಆಡಳಿತದ ಪ್ರಾದೇಶಿಕ ಕಚೇರಿಗಳ ಮುಚ್ಚುವಿಕೆ, ವಲಸಿಗರ ಗಡೀಪಾರು ಮತ್ತು ಆರೋಗ್ಯ ಕಾರ್ಯಕ್ರಮಗಳ ನಿಧಿಯನ್ನು ಕಡಿತಗೊಳಿಸುವುದರ ವಿರುದ್ದ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಸಾಮಾಜಿಕ ಸೇವೆಗಳ ಕಡಿತ :ಟ್ರಂಪ್ ಆಡಳಿತವು ಸೋಷಿಯಲ್ ಸೆಕ್ಯುರಿಟಿ,ಮೆಡಿಕೇಡ್ ಮುಂತಾದ ಸಾಮಾಜಿಕ ಸೇವೆಗಳ ಮೇಲೆ ಕಡಿತಗಳನ್ನು ಹೊರಡಿಸಿದುದಕ್ಕೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ.
- ಫೆಡರಲ್ ಉದ್ಯೋಗಿಗಳ ಕಡಿತ : ಡಿಪಾರ್ಟ್ಮೆಂಟ್ ಆಫ್ ಗವರ್ನ್ಮೆಂಟ್ ಎಪಿಷಿಯನ್ಸಿ(DOGE) ಮೂಲಕ ಎಲಾನ್ ಮುಸ್ಕ್ ನೇತೃತ್ವದಲ್ಲಿ ನಡೆದ ಫೆಡರಲ್ ಉದ್ಯೋಗಿಗಳ ವಿಶಾಲ ಮಟ್ಟದ ಕಡಿತಗಳಿಗೆ ವಿರೋಧ ವ್ಯಕ್ಸಪಡಿಸಲಾಯಿತು.
- ಅಧಿಕಾರ ವಿಸ್ತರಣೆ ಮತ್ತು ಪ್ರಭಾವಶಾಲಿತ್ವ: ಟ್ರಂಪ್ ಮತ್ತು ಮಸ್ಕ್ ಅವರ ಆಡಳಿತದಲ್ಲಿ ಅಧಿಕಾರದ ಕೇಂದ್ರಿಕರಣ ಮತ್ತು ಅನಧಿಕೃತ ಪ್ರಭಾವಶಾಲಿತ್ವದ ಬಗ್ಗೆ ಚಿಂತನೆ ವ್ಯಕ್ತಪಡಿಸಲಾಯಿತು.
- ಆರ್ಥಿಕ ನೀತಿಗಳು ಮತ್ತು ತೆರಿಗೆಗಳು: ಆಡಳಿತವು ಹೇರಿದ ಕಠಿಣ ತೆರಿಗೆಗಳು ಮತ್ತು ಟಾರಿಫ್ಸ್ ಈ ಭಾಗದಲ್ಲಿ ಆತಂಕವನ್ನುಂಟುಮಾಡಿದವು. ಈ ನೀತಿಗಳು ಅಂತಾರಾಷ್ಟ್ರೀಯ ವ್ಯಾಪಾರದ ಮೇಲೆ ಪರಿಣಾಮ ಬೀರುವುದಾಗಿ ಮತ್ತು ದೇಶೀಯ ಉದ್ಯಮಗಳನ್ನು ಹಾನಿ ಮಾಡುತ್ತವೆ ಎಂದು ಆರೋಪಿಸಲಾಗಿದೆ.
- ಎಲೋನ್ ಮಸ್ಕ್ ನ ಪ್ರಭಾವ : ಕಂಪನಿ ಹಿತಾಸಕ್ತಿ ಈ ರಾಜಕೀಯ ಹಂತಗಳಲ್ಲಿ ಹೆಚ್ಚುವರಿ ಪ್ರಭಾವ ವನ್ನು ಹೊಂದಿದ್ದು, ಇದನ್ನು ನಿರ್ಲಕ್ಷಿಸಿ ಸರ್ಕಾರದ ನೀತಿಗಳನ್ನು ರೂಪಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
- ಗಣತಂತ್ರದ ಸಂಘಟನೆ”ಅಮೇರಿಕಾದ ಸ್ಥಿರ ಗಣತಾಂತ್ರಿಕ ಸಂಸ್ಥೆಗಳನ್ನು ಹಾಳು ಮಾಡುವಂತಹ ನೀತಿಗಳು ದೇಶದ ಮೂಲಭೂತ ವ್ಯವಸ್ಥೆಗೆ ಧಕ್ಕೆ ತರುವಂತೆ ಕಾಣುತ್ತಿವೆ. ಟ್ರಂಪ್ ಮತ್ತು ಅವರ ಆಡಳಿತವು ಅಮೇರಿಕಾದ ಜನತೆಗಾಗಿ ಅತಿ ದೊಡ್ಡ ಮತ್ತು ಪ್ರಮುಖ ಸಂಸ್ಥೆಗಳನ್ನು, ಅದರಲ್ಲೂ ಗಣತಾಂತ್ರಿಕ ಸಂಸ್ಥೆಗಳನ್ನು (ಉದಾಹರಣೆಗೆ ನ್ಯಾಯಾಂಗ, ಚುನಾವಣೆ ವ್ಯವಸ್ಥೆ, ಪ್ರಜೆಗಳ ಹಕ್ಕುಗಳನ್ನು ರಕ್ಷಿಸುವ ಸಂಸ್ಥೆಗಳು) ಅವಮಾನಿತ ಮಾಡುವ ಅಥವಾ ಅವುಗಳನ್ನು ದುರ್ಬಲಗೊಳಿಸುವಂತೆ ಕಾಣುತ್ತಿವೆ.
- ಇದರಿಂದ, ಜನರು ದೇಶದ ಸಮರ್ಥವಾದ ಮತ್ತು ನಂಬಿಗಸ್ತ ಸಂಸ್ಥೆಗಳ ಮೇಲೆ ಧಕ್ಕೆ ಬೀರುವಂತಾಗುತ್ತದೆ, ಮತ್ತು ಇದು ಅಮೇರಿಕಾದ ಸಂವಿಧಾನ ಮತ್ತು ಅವುಗಳ ಸ್ಥಿರತೆಗೆ ಅಪಾಯ ತರಬಹುದು ಎಂದು ಭಾವಿಸುತ್ತಾರೆ.
ಒಟ್ಟಾರೆ ಈ ಪ್ರತಿಭಟನೆಗಳು ಟ್ರಂಪ್ ಆಡಳಿತ ವಿರುದ್ದವಾದ ಹಾಗೂ ರಾಷ್ಟ್ರದಾದ್ಯಂತ ದೊಡ್ಡ ಪ್ರತಿಭಟನೆಗಳಾಗಿದ್ದು, ಸರ್ಕಾರದ ನೀತಿಗಳ ವಿರುದ್ದ ಸಾರ್ವಜನಿಕ ಅಸಮಾಧಾನವನ್ನು ಪ್ರತಿಬಿಂಬಿಸುತ್ತವೆ. ಪ್ರತಿಭಟನಾಕಾರರು ಸರ್ಕಾರದ ನೀತಿಗಳನ್ನು ಪುನ: ಪರಿಗಣಿಸಲು ಮತ್ತು ಸಾರ್ವಜನಿಕ ಸೇವೆಗಳ ರಕ್ಷಣೆಗೆ ಒತ್ತಾಯಿಸುತ್ತಿದ್ದಾರೆ. ಈ ಮೂಲಕ ಟ್ರಂಪ್ ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಕಾದುನೊಡಬೇಕಿದೆ.
ಸಂಗೀತ ಎಸ್
ಆಲ್ಮಾ ನ್ಯೂಸ್ ವಿದ್ಯಾರ್ಥಿನಿ