ಜಾತಿ ಬೆಂಬಲದ ಮೊರೆ ಹೊಗ್ತಾರಾ ಯತ್ನಾಳ್?

ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಹೆಚ್ಚುತ್ತಲೇ ಇದೆ. ರಾಜ್ಯಾಧ್ಯಕ್ಷನ ಸ್ಥಾನಕ್ಕೆ ಜಟಾಪಟಿ ಆಗುತ್ತಲೇ ಇದೆ. ದಿನದಿಂದ ದಿನಕ್ಕೆ ಅಸಮಧಾನದ ಬೆಂಕಿ ಬುಗಿಲೇಳುತ್ತಲೇ ಇದೆ. ಬಸವನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬ್ರಹ್ಮಾಸ್ತ್ರದ ರೀತಿಯಲ್ಲಿ ಜಾತಿ ಬೆಂಬಲದ ಮೊರೆ ಹೋಗಿದ್ದಾರೆ ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಸಮ್ಮುಖದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಲಿಂಗಾಯತ್ ಸಮುದಾಯದ ಹಲವು ನಾಯಕರು ಸೇರಿ ಸಭೆಯನ್ನು ನಡೆಸಿದರು.

ಸಭೆಯಲ್ಲಿ ಬಿಜೆಪಿ ಮಾಜಿ ಶಾಸಕರು, ಮಾಜಿ ಪದಾಧಿಕಾರಿಗಳು ಜಿಲ್ಲಾ ಮಾಜಿ ಅಧ್ಯಕ್ಷರು ಸೇರಿ ಸುಮಾರು 70 ಜನರು ಭಾಗವಹಿಸಿದ್ದರು. ಈ ಸಭೆಯಲ್ಲಿ ಕೆಲವೊಂದು ಆರೋಪಗಳು ಕೇಳಿಬಂದಿದ್ದು ಲೋಕಸಭೆ ಚುನಾವಣೆಯಲ್ಲಿ ʼಚುನಾವಣೆಯಲ್ಲಿ ಗೆದ್ದು ಬೆಳೆಯುತ್ತಾರೆʼ ಎನ್ನುವ ಕಾರಣಕ್ಕೆ ಟಿಕೆಟ್ ತಪ್ಪಿಸಿದ್ದಾರೆ ಎಂಬ ಆರೋಪದ ಜೊತೆಗೆ ವಿಜಯೇಂದ್ರ ಮತ್ತು ಯಡಿಯೂರಪ್ಪ ನಡೆಯ ವಿರುದ್ಧವು ಆರೋಪಗಳು ಕೇಳಿ ಬಂದವು.
ಒಂದು ವೇಳೆ ಲಿಂಗಾಯತರಿಗೆ ರಾಜ್ಯಧ್ಯಕ್ಷ ಸ್ಥಾನ ನೀಡಲು ಅವಕಾಶವಿಲ್ಲದಿದ್ದರೂ ವಿಜಯೇಂದ್ರ ಅವರನ್ನು ಕೆಳಗಿಳಿಸಿ SC ಸಮುದಾಯದ ಅರವಿಂದ್ ಲಿಂಬಾವಳಿ, OBC ಸಮುದಾಯದ ಸುನಿಲ್ ಕುಮಾರ್ ಅಥವಾ ಕುಮಾರ್ ಬಂಗಾರಪ್ಪ ಅವರನ್ನು ರಾಜ್ಯಾಧ್ಯಕ್ಷನಾಗಿ ಮಾಡಿದರೆ ಏನು ಸಮಸ್ಯೆ ಇಲ್ಲ ಆದರೆ ವಿಜಯೇಂದ್ರ ಯಾವುದೇ ಕಾರಣಕ್ಕೂ ರಾಜ್ಯಾಧ್ಯಕ್ಷ ಪಟ್ಟ ದಲ್ಲಿ ಮುಂದುವರೆಯುವುದಕ್ಕೆ ಅವಕಾಶ ನೀಡಬಾರದು ಎಂದು ಲಿಂಗಾಯತ್ ಸಮುದಾಯದ ನಾಯಕರ ಮೊದಲ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಂಡಿ̧ದ್ದು ಮುಂಬರುವ ದಿನಗಳಲ್ಲಿ ಪಕ್ಷದ ವರಿಷ್ಠರಿಗೂ ಈ ತೀರ್ಮಾನ ತಿಳಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸುವೆ.
ಇತ್ತ ಲಿಂಗಾಯತ್ ಮುಖಂಡರೆಲ್ಲಾ ವಿಜೇಂದ್ರ ವಿರುದ್ಧ ತಿರುಗಿ ಬಿದ್ದು ಬಹಿರಂಗವಾಗಿ ಸಭೆ ನಡೆಸಿದ ಹಿನ್ನೆಲೆ ಎಚ್ಚೆತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಲಿಂಗಾಯತ್ ಸಮುದಾಯದ ಸ್ವಾಮೀಜಿಗಳನ್ನು ಸೇರಿಸಿ ಬಲ ಪ್ರದರ್ಶನ ಮಾಡಲು ತಯಾರಿಯನ್ನು ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮೇಘಾ ಜಗದೀಶ್
ಆಲ್ಮಾ ಮೀಡಿಯಾ ವಿದ್ಯಾರ್ಥಿನಿ