ಭಾರತೀಯ ಪೈಲಟ್ ಅಂತರಿಕ್ಷಕ್ಕೆ . ಮೇ ನಲ್ಲಿ ಶುಭಾಂಶು ಶುಕ್ಲಾ ಹಾರಾಟ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ನಾಲ್ಕನೇ ಖಾಸಗಿ ಗಗನಯಾತ್ರಿ ಕಾರ್ಯಾಚರಣೆಯಾದ ಆಕ್ಸಿಯಮ್ ಮಿಷನ್ 4ಗಾಗಿ ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಮಿಷನ್ ಪೈಲಟ್ ಆಗಿ ನೇಮಿಸಲಾಗಿದೆ.

ಭಾರತೀಯ ವಾಯುಪಡೆಯ ವಿಂಗ್ ಕಮಾಂಡ್ ಶುಭಾಂಶು ಶುಕ್ಲಾ ಅವರು ಇಸ್ರೋದ ಗಗಯಾನ ಯೋಜನೆಯಡಿ ಬಾಹ್ಯಾಕಾಶಕ್ಕೆ ಹಾರಲು ಸಿದ್ದರಾಗಿದ್ದಾರೆ. ಅವರು ಮೇ 4, 2025 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್) international space station ಪ್ರಯಾಣ ಬೆಳೆಸಲಿದ್ದಾರೆ. ಇದು ಭಾರತದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾತ್ರೆಯಾಗಿದ್ದು, ಇದು ಇತಿಹಾಸದ ಮಹತ್ವದ ಹೆಜ್ಜೆಯಾಗಿದೆ. 1984 ರಲ್ಲಿ ವಿಂಗ್ ಕಮಾಂಡ್ ರಾಕೇಶ್ ಶರ್ಮಾ ಅವರ ಮೈಲಿಗಲ್ಲು ಕಾರ್ಯಾಚರಣೆಯ ನಂತರ ಬಾಹ್ಯಾಕಾಶ ಪ್ರಯಾಣಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆ ಇವರು ಪ್ರಾತರಾಗುವುದರಿಂದ ಅವರ ಆಯ್ಕೆ ಭಾರತಕ್ಕೆ ಒಂದು ಐತಿಹಾಸಿಕ ಕ್ಷಣವಾಗಿದೆ.
ಈಖಾಸಗಿ ಗಗನಯಾತ್ರಿ ಕಾರ್ಯಾಚರಣೆಯಲ್ಲಿ ಶುಕ್ಲಾ ಅವರೊಂದಿಗೆ ನಾಸಾದ ಮಾಜಿ ಗಗನಯಾತ್ರಿ ಪೆಗ್ಗಿ ವಿಟ್ಸನ್, ಮಿಷನ್ ಕಮಾಂಡರ್ ಆಗಿ ಸೇವೆ ಸಲ್ಲಿಸಲಿದ್ದಾರೆ, ಜೊತೆಗೆ ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಕೂಡ ಇದ್ದಾರೆ. ಅವರ ಕಾರ್ಯಾಚರಣೆಯು ISS ನಲ್ಲಿ 14 ದಿನಗಳ ಕಾಲ ಇರಲಿದೆ, ಈ ಸಮಯದಲ್ಲಿ ಅವರು ವೈಜ್ಞಾನಿಕ ಸಂಶೋಧನೆ, ಸಂವಹನ ಕಾರ್ಯಕ್ರಮಗಳು ಮತ್ತು ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಕಾರ್ಯಾಚರಣೆಯು ಪೋಲೆಂಡ್ ಮತ್ತು ಹಂಗೇರಿಯಿಂದ ಮೊದಲ ಗಗನಯಾತ್ರಿಗಳನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯುತ್ತದೆ. ಗಗನಯಾನದಲ್ಲಿ ಮೂರು ಸದಸ್ಯರ ಸಿಬ್ಬಂದಿಯನ್ನು ಮೂರು ದಿನಗಳವರೆಗೆ ನಡೆಯುವ ಕಾರ್ಯಾಚರಣೆಗಾಗಿ 400 ಕಿ.ಮೀ ಕಡಿಮೆ ಭೂಮಿಯ ಕಕ್ಷೆಗೆ ಕಳುಹಿಸುವ ಗುರಿಯನ್ನು ಹೊಂದಿದೆ. ಈ ಉಪಕ್ರಮಕ್ಕಾಗಿ ಇಸ್ರೋ ನಾಸಾ ಮತ್ತು ಆಕ್ಸಿಯಮ್ ಸ್ಪೇಸ್ ಜೊತೆ ಪಾಲುದಾರಿಕೆ ಹೊಂದಿದೆ. ಹೆಚ್ಚುವರಿಯಾಗಿ, ಭಾರತವು ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅವರನ್ನು ಆಕ್ಸ್ -4 ಗಾಗಿ ಬ್ಯಾಕಪ್ ಗಗನಯಾತ್ರಿಯಾಗಿ ನೇಮಿಸಿದೆ. ಶುಕ್ಲಾ ಹಾರಲು ಸಾಧ್ಯವಾಗದಿದ್ದರೆ, ನಾಯರ್ ಈ ಕಾರ್ಯಾಚರಣೆಯಲ್ಲಿ ದೇಶವನ್ನು ಪ್ರತಿನಿಧಿಸಲು ಮುಂದಾಗುತ್ತಾರೆ.

ಆಕ್ಸ್-4 ಐಎಸ್ ಎಸ್ ಗೆ ನಾಲ್ಕನೇ ಖಾಸಗಿ ಗಗನಯಾತ್ರಿ ಕಾರ್ಯಾಚರಣೆಯನ್ನು ಫ್ಲೋರಿಡಾದ ನಾಸಾದ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ಉಡಾವಣೆ ಮಾಡಲಾಗುವುದು, ಇದನ್ನು ಫಾಲ್ಕನ್ 9 ರಾಕೆಟ್‌ನಿಂದ ಚಾಲನೆ ಮಾಡಲಾಗುತ್ತದೆ.
ಈ ಮಿಷನ್ ಭಾರತ ಮತ್ತು ಅಮೆರಿಕದ ನಡುವಿನ ಬಾಹ್ಯಾಕಾಶ ಸಹಯೋಗದ ಪ್ರಮುಖ ಹಂತವಾಗಿದೆ. ಇದು ಐಎಎಸ್‌ಕೆ ಭಾರತೀಯ ಖಗೋಳಯಾನಿಯ ಪ್ರವೇಶವನ್ನು ಗುರುತಿಸುತ್ತದೆ ಮತ್ತು ಭಾರತಕ್ಕೆ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಹೊಸ ಹಾದಿಯನ್ನು ತೆರೆದಿಡುತ್ತದೆ. ಈ ಮಿಷನ್ ಭಾರತೀಯ ಖಗೋಳಯಾನ ಕ್ಷೇತ್ರದಲ್ಲಿ ಮಹತ್ವಪೂರ್ಣ ಸಾಧನೆ ಆಗಿದ್ದು, ದೇಶಾದ್ಯಾಂತ ಹೆಮ್ಮೆಯ ವಿಷಯವಾಗಿದೆ.
ಸಂಗೀತ ಎಸ್ .
ಆಲ್ಮಾ ನ್ಯೂಸ್ ವಿದ್ಯಾರ್ಥಿನಿ