ಕರ್ನಾಟಕ ಇಂಟರ್ನ್ಯಾಷನಲ್ ಎಕ್ಸ್‌ಪೋ 2025

ಕರ್ನಾಟಕ ಇಂಟರ್ನ್ಯಾಷನಲ್ ಏಕ್ಸಪೋ ಸಮಾವೇಶ ಫೆಬ್ರವರಿ 26 ರಿಂದ ಪ್ರಾರಂಭಗೊಳ್ಳಲಿದೆ. ಈ ಸಮಾವೇಶವು ನಮ್ಮ ನಾಡಿನ ಪ್ರವಾಸಿ ಕ್ಷೇತ್ರಗಳು ನಮ್ಮ ಸಂಸ್ಕೃತಿ ನಮ್ಮ ಆಚಾರ ವಿಚಾರಗಳನ್ನು ಜಗತ್ತಿಗೆ ಪರಿಚಯಿಸುವ ಸಲುವಾಗಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯವರಿಂದ ಕಾರ್ಯಕ್ರಮ ಉದ್ಘಾಟಿಸಲಿದ್ದು, ಫೆಬ್ರವರಿ 26 ಮತ್ತು 28ರಂದು ಬೆಂಗಳೂರು ಅಂತರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಸಭೆಗಳು ನಡೆಯಲಿದೆ. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಪ್ರವಾಸೋದ್ಯಮ ಸಚಿವ ಎಸ್ ಕೆ ಪಾಟೀಲ್ ಹಾಗೂ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಉಪಸ್ಥಿತರಿರಲಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಈ ಸಮಾವೇಶಕ್ಕೆ ಬರುವ ನಿರೀಕ್ಷೆ ಇದೆ.

ಕೈಟ್ ಸಮಾವೇಶದಲ್ಲಿ ಭಾರತದ 400ಕ್ಕೂ ಹೆಚ್ಚು ಮಂದಿ ಮತ್ತು 17 ಅಂತರಾಷ್ಟ್ರೀಯ ಮಾಧ್ಯಮ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದರ ಜೊತೆಗೆ ಜರ್ಮನಿ, ಅಬುಧಾಭಿ, ಫ್ರಾನ್ಸ್ ಸೇರಿದಂತೆ 107 ದೇಶದ ವಿವಿಧ ಅಂತರಾಷ್ಟ್ರೀಯ ಪ್ರವಾಸೋದ್ಯಮ ಕ್ಷೇತ್ರದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಈ ಕೈಟ್ ಸಮಾವೇಶದ ಮುಖ್ಯ ಉದ್ದೇಶವೆಂದರೆ ರಾಜ್ಯದ ಪ್ರವಾಸಿ ತಾಣಗಳತ್ತ ದೇಶ ವಿದೇಶದ ಪ್ರವಾಸಿಗರನ್ನು ಸೆಳೆಯುವುದಾಗಿದೆ. ಇಲ್ಲಿನ ಪ್ರವಾಸಿ ತಾಣಗಳ ವಿಶೇಷ, ಪ್ರವಾಸೋದ್ಯಮ ಇಲಾಖೆಯ ಸೌಕರ್ಯ ಇವೆಲ್ಲದರ ಬಗ್ಗೆ ವಿಶ್ವಕ್ಕೆ ಪರಿಚಯಿಸಿ ವಿಶ್ವದ ಜನರನ್ನ ಪ್ರವಾಸಿ ತಾಣಗಳತ್ತ ಸೆಳೆಯುವುದೇ ಈ ಸಮಾವೇಶದ ಉದ್ದೇಶ. ಇದರಿಂದ ರಾಜ್ಯದ ಖಜಾನೆಗೂ ಸಹ ಲಾಭ ಆಗುವ ನಿರೀಕ್ಷೆ ಇದೆ.
ಮೇಘಾ ಜಗದೀಶ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ