ಕರ್ನಾಟಕದಲ್ಲಿ ಅತೀ ಹೆಚ್ಚು ದಾಖಲಾದ ʼಡಿಜಿಟಲ್ ಅರೆಸ್ಟ್ʼ ಪ್ರಕರಣಗಳು…ನೂರಾರು ಕೋಟಿ ರೂ. ವಂಚನೆ..!
ಕರ್ನಾಟಕದಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾಜ್ಯದಲ್ಲಿ ಕೇವಲ ಒಂದೇ ವರ್ಷದಲ್ಲಿ ಸುಮಾರು 641 ಜನರು ʼಡಿಜಿಟೆಲಿ ಅರೆಸ್ಟ್ʼ ಆಗಿದ್ದಾರೆ. ಈ ಬಗ್ಗೆ ಸದನದಲ್ಲಿ ನಡೆದ ಚರ್ಚೆಯಲ್ಲಿ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಗುರುವಾರ ಬೆಳಗಾವಿಯ ವಿಧಾನ ಪರಿಷತ್‌ನಲ್ಲಿ ಮಾಹಿತಿ ನೀಡಿದರು.
“ಈ ವರ್ಷದಲ್ಲಿ 641 ಡಿಜಿಟಲ್ ಅರೆಸ್ಟ್ ಪ್ರಕರಣಗಳು ದಾಖಲಾಗಿವೆ, ಇದರಿಂದ 109 ಕೋಟಿ ರೂ. ಗೂ ಹೆಚ್ಚು ವಂಚನೆ ಆಗಿದೆ”. ಅಧಿಕಾರಿಗಳು 9.4 ಕೋಟಿ ಜಪ್ತಿ ಮಾಡಿಕೊಂಡಿದ್ದು, 27 ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ 480 ವಂಚನೆ ಪ್ರಕರಣಗಳನ್ನು ದಾಖಲಾಗಿದ್ದು, ಸುಮಾರು 42.4 ಕೋಟಿ ರೂಗಳ ವಂಚನೆ ನಡೆದಿದೆ.
ಜೊತೆಗೆ ಮೈಸೂರಿನಲ್ಲಿ 24 ಮತ್ತು ಮಂಗಳೂರಲ್ಲಿ 21 ಪ್ರಕರಣಗಳು ದಾಖಲು ಆಗಿವೆ.
ಏನಿದು ಡಿಜಿಟಲ್ ಅರೆಸ್ಟ್?
ಈ ಹಗರಣಗಳಲ್ಲಿ ವಂಚಕರು ಪೊಲೀಸ್ ,ED, CBI, ಆದಾಯ ತೆರಿಗೆ ಅಧಿಕಾರಿಗಳಂತೆ ವರ್ತಿಸಿ ವೀಡಿಯೋ ಕಾಲ್‌ಗಳ ಮೂಲಕ ಜನರನ್ನು ವಂಚಿಸುತ್ತಾರೆ. ನಿಮ್ಮ ಮೇಲೆ ನಾರ್‌ಕೋಟಿಕ್ಸ್ ಮತ್ತು ಸ್ಮಗ್ಲಿಂಗ್ ತನಿಖೆ ನಡೆಯುತ್ತಿದೆ ಎಂದು ನಂಬಿಸಿ ಅವರ ಬ್ಯಾಂಕ್ ಖಾತೆ, ಡಿಜಿಟಲ್ ಪಾವತಿ ಹಾಗೂ ಖಾಸಗಿ ವಿವರಗಳನ್ನು ಸಂಗ್ರಹಿಸಿ, ನಂತರ ಹಣಕ್ಕಾಗಿ ಆಗ್ರಹಿಸುತ್ತಾರೆ.
ಈ ರೀತಿ ಮೋಸ ಹೋದವರಿಗೆ, ಇಂತಹ ಘಟನೆಗಳ ಬಗ್ಗೆ ದೂರು ನೀಡಲು ಸರ್ಕಾರ ʼ1930ʼ ಸಹಾಯವಾಣಿಯನ್ನು ಸ್ಥಾಪಿಸಿದೆ. ಈ ರೀತಿಯ ಕೃತ್ಯ ಎಸಗುತ್ತಿರುವ , ಸುಮಾರು 700 ಸೋಶಿಯಲ್ ಮೀಡಿಯಾ ಅಕೌಂಟ್‌ಗಳು, 268 ಫೇಸ್‌ಬುಕ್ ಮತ್ತು 465 ಟೆಲಿಗ್ರಾಮ್ ಗ್ರೂಪ್‌ಗಳನ್ನು ಸೈಬರ್ ಕ್ರೈಮ್ ಇಲಾಖೆ ನಿಷ್ಕ್ರಿಯಗೊಳಿಸಿದೆ.
ಇದರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ, ಹೆಚ್ಚಾಗಿ ವಿದ್ಯಾರ್ಥಿಗಳೇ ಇಂಥವರಿಗೆ ಬಲಿಯಾಗುವುದರಿಂದ, ಶಿಕ್ಷಣ ಸಂಸ್ಥೆಗಳಲ್ಲಿ ಈ ಬಗ್ಗೆ ಜಾಗೃತಿ ಮೂಡೆಸಬೇಕೆಂದು ಗೃಹ ಸಚಿವ ಪರಮೇಶ್ವರ್ ಒತ್ತಾಯಿಸಿದ್ದಾರೆ. ಕರ್ನಾಟಕದಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಾಜ್ಯದಲ್ಲಿ ಕೇವಲ ಒಂದೇ ವರ್ಷದಲ್ಲಿ ಸುಮಾರು 641 ಜನರು ʼಡಿಜಿಟೆಲಿ ಅರೆಸ್ಟ್ʼ ಆಗಿದ್ದಾರೆ. ಈ ಕುರಿತು ಸದನದಲ್ಲಿ ಚರ್ಚೆಯಾಯಿತು, ಇದರ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಗುರುವಾರ ಬೆಳಗಾವಿಯ ವಿಧಾನ ಪರಿಷತ್‌ನಲ್ಲಿ ತಿಳಿಸಿದರು.
ಧನ್ಯಾ ರೆಡ್ಡಿ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ