ರಾಜ್ಯದಲ್ಲಿ ಹಕ್ಕಿ ಜ್ವರಕ್ಕೆ ಹೊಸ ಮಾರ್ಗಸೂಚಿ..!

ರಾಜ್ಯದಲ್ಲಿ ಹಕ್ಕಿ ಜ್ವರ ಪ್ರಕರಣಗಳು ಹೆಚ್ಚಾಗಿದ್ದು, ಕೆಲವು ಸ್ಥಳಗಳಲ್ಲಿ ಪ್ರಕರಣ ದಾಖಲಾಗಿದೆ. ಹಕ್ಕಿ ಜ್ವರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಾರ್ಗ ಸೂಚಿ ಬಿಡುಗಡೆಗೊಳಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರವು ಸೋಮವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹಕ್ಕಿ ಜ್ವರದ ಭೀತಿ ಮಧ್ಯಯು ಕೋಳಿ ಸೇವನೆಗೆ ಏನೆಲ್ಲ ಮುಂಜಾಗ್ರತ ಕ್ರಮವನ್ನ ತೆಗೆದುಕೊಳ್ಳಬೇಕು ಎಂದು ಪಶು ಸಂಗೋಪನ ಇಲಾಖೆಯ ಮಾರ್ಗಸೂಚಿ ಹೊರಡಿಸಿದೆ.

70 ಡಿಗ್ರಿ ಸೆಂಟಿ ಗ್ರೇಡ್ ಉಷ್ಣಾಂಶದಲ್ಲಿ ಕನಿಷ್ಠ 30 ನಿಮಿಷ ಕೋಳಿ ಮಾಂಸವನ್ನ ಬೆಳೆಸಿ ಮಾಂಸ ಮತ್ತು ಮೊಟ್ಟೆಯನ್ನು ಸೇವಿಸಬಹುದು ಎಂದು ಹೇಳಿದೆ. ಇದೇ ವಿಷಯವಾಗಿ ಪಶು ಸಂಗೋಪನ ಇಲಾಖೆ ಕೋಳಿ ಸಾಕು ಪ್ರದೇಶಗಳಿಗೆ ಕೆಲವು ಮುಂಜಾಗ್ರತ ಕ್ರಮಗಳು ನೀಡಿದೆ.
1 ಕೋಳಿ ಫಾರಂ ಗಳನ್ನು ಪ್ರತಿದಿನ ಶುಚಿಗೊಳಿಸಬೇಕು ಕೋಳಿಗಳಿಗೆ ನೀಡುವ ಆಹಾರವನ್ನು ಪ್ರತಿದಿನ ಬದಲಾಯಿಸಬೇಕು.
2 ಕೋಳಿ ಫಾರಂನಲ್ಲಿ ಬೇರೆ ಹಕ್ಕಿಗಳು ಕೋಳಿಗಳ ಸಂಪರ್ಕಕ್ಕೆ ಬಾರದಂತೆ ಎಚ್ಚರಿಕೆಯನ್ನು ವಹಿಸಬೇಕು.
3 ಸಾರ್ವಜನಿಕರು ಅನಾವಶ್ಯಕವಾಗಿ ಕೋಳಿ ಫಾರಂಗೆ ಭೇಟಿ ನೀಡಬಾರದು.
4 ಕೋಳಿ ಫಾರಂನಲ್ಲಿ ಅವಶ್ಯವಾಗಿ ಸ್ಯಾನಿಟೈಸ್ಸೇಷನ್ ಬಳಸಬೇಕು.
5 ಕೋಳಿ ಫಾರಂ ಗಳಲ್ಲಿ ಕೆಲಸ ನಿರ್ವಹಿಸುವವರು ಹೆಚ್ಚು ಸ್ವಚ್ಛತೆಗೆ ಪಾಲಿಸಬೇಕು.
ಮೇಘಾ ಜಗದೀಶ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ