ನಾಮಪತ್ರದ ಲೋಪ ದೋಷದ ಬಗ್ಗೆ ಪ್ರಶ್ನೆ ಮಾಡುವ ಹಕ್ಕು ಖಾಸಗಿ ವ್ಯಕ್ತಿಗಳಿಗಿಲ್ಲ – ಹೈ ಕೋರ್ಟ್ ಆದೇಶ

“ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳು ಸಲ್ಲಿಸುವ ಚುನಾವಣಾ ಪ್ರಮಾಣ ಪತ್ರದಲ್ಲಿರುವ ಲೋಪ ದೋಷಗಳ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಹಕ್ಕು ಖಾಸಗಿ ವ್ಯಕ್ತಿಗಳಿಗಿಲ್ಲ” ಎಂದು ಹೈ ಕೋರ್ಟ್ ಆದೇಶಿಸಿದೆ. “ಅಭ್ಯರ್ಥಿಗಳು ಸಲ್ಲಿಸುವ ಚುನಾವಣಾ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ಅಥವಾ ಮಾಹಿತಿ ಮಾರೆಮಾಚಿರುವುದು ಕಂಡು ಬಂದರೆ ಈ ಕುರಿತು ದೂರು ದಾಖಲಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಮಾತ್ರ ಇದೆ” ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಈ ಕುರಿತು ಕಳೆದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಮಹದೇವಪುರ ಶಾಸಕಿ ಮಂಜುಳಾ ಲಿಂಬಾವಳಿ ಮತ್ತು ಬೀದರ್ ದಕ್ಷಿಣ ಶಾಸಕ ಶೈಲೇಂದ್ರ ಬೆಲ್ದಾಳ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ನಾಮಪತ್ರದಲ್ಲಿ ದೋಷವಿದೆ ಎಂದು ಖಾಸಗಿ ವ್ಯಕ್ತಿಗಳು ದಾಖಲಿಸಿದ ದೂರನ್ನು ರದ್ದು ಮಾಡುವಂತೆ ಕೋರಿ ಶಾಸಕರು ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯ ಪರ ತೀರ್ಪು ನೀಡಿದ ಹೈಕೋರ್ಟ್ ಶಾಸಕರ ವಿರುದ್ಧ ದಾಖಲಾದ ಪ್ರಕರಣಗಳನ್ನು ರದ್ದು ಪಡಿಸಿದೆ.
ಈ ಕುರಿತಂತೆ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 125ಎ ಅನ್ವಯ ಅಭ್ಯರ್ಥಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ನಾಮಪತ್ರದಲ್ಲಿ ಸುಳ್ಳು ಮಾಹಿತಿ ಅಥವಾ ಮಾಹಿತಿ ಮರೆಮಾಚಿರುವುದು ಕಂಡು ಬಂದರೆ ಅಭ್ಯರ್ಥಿಗಳ ವಿರುದ್ಧ ದೂರು ದಾಖಲಿಸುವ ಹಕ್ಕು ಚುನಾವಣಾ ಆಯೋಗಕ್ಕೆ ಮಾತ್ರ ಇದೆ. ಖಾಸಗಿ ವ್ಯಕ್ತಿಗಳಿಗೆ ದೂರು ದಾಖಲಿಸುವ ಹಕ್ಕು ಇರುವುದಿಲ್ಲ ಎಂದು ತಿಳಿಸಿ ಖಾಸಗಿ ವ್ಯಕ್ತಿಗಳು ಸಲ್ಲಿಸಿದ ಪ್ರಕರಣವನ್ನು ರದ್ದು ಪಡಿಸಿದೆ. ನಂತರ ಪ್ರಕರಣದಲ್ಲಿ ದೂರು ನೀಡಿರುವ ಖಾಸಗಿ ವ್ಯಕ್ತಿಗಳು ಕಾನೂನಿನಲ್ಲಿರು ಪರಿಹಾರ ಪಡೆಯಲು ಮುಕ್ತರಾಗಿರುತ್ತಾರೆ ಎಂದು ತಿಳಿಸಿದೆ.
ಈ ಬಗ್ಗೆ ಮಂಜುಳಾ ಲಿಂಬಾವಳಿ ವಿರುದ್ಧ ಖಾಸಗಿ ವ್ಯಕ್ತಿ ನಲ್ಲೂರಳ್ಳಿ ನಾಗೇಶ್ ಎಂಬುವವರು, ಅಭ್ಯರ್ಥಿಯು ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ತಾವು ಪಾಲುದಾರರಾಗಿರುವ ಸಂಸ್ಧೆಯ ಆಸ್ತಿಯ ಬಗ್ಗೆ ಮಾಹಿತಿ ಮರೆಮಾಚಿದ್ದಾರೆ, ಹಾಗೂ ಅವಲಂಬಿತರ ಬಗ್ಗೆ ಮಾಹಿತಿ ನೀಡಬೇಕಿದ್ದ ಕಾಲಂ ಖಾಲಿ ಬಿಟ್ಟಿದ್ದಾರೆ ಎಂದು 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಕ್ರಿಮಿನಲ್ ದೂರು ನೀಡಿದ್ದರು. ಮಂಜುಳಾ ಲಿಂಬಾವಳಿ ಪರ ವಾದಿಸಿದ ವಕಿಲರು ಮಂಜುಳಾ ಅವರ ಮಕ್ಕಳು ತಮ್ಮದೆ ವ್ಯಾಪಾರ ವಹಿವಾಟು ಮಾಡಿ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ ಅವರು ಮಂಜುಳಾ ಅವರ ಮೇಲೆ ಅವಲಂಬಿತರಾಗಿಲ್ಲ ಹಾಗೂ ಮಂಜುಳಾ ಲಿಂಬಾವಳಿ ಅವರ ಪಾಲುದಾರಿಕೆಯಲ್ಲಿರುವ ಸಂಸ್ಥೆ ಕಾರ್ಪೋರೆಟ್ ಸಂಸ್ಥೆ ಆದರ ಮಾಲಿಕರು ಮಂಜುಳಾ ಅವರಲ್ಲ ಎಂದು ವಾದಿಸಿದರು.
ಇದೆ ರೀತಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಳ್ದಾಳೆ ವಿರುದ್ಧ ಖಾಸಗಿ ವ್ಯಕ್ತಿ ರಾಜಕುಮಾರ್‌ಮಡ್ಡಿ, ಅಭ್ಯರ್ಥಿಯು ಸಲ್ಲಿಸಿದ್ದ ನಾಮಪತ್ರದಲ್ಲಿ ಗ್ರಾಮದ ಕುರಿತು ಸುಳ್ಳು ಮಾಹಿತಿ ನೀಡಿದ್ದಾರೆಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಶಾಸಕರ ಪರ ವಾದಿಸಿದ ವಕೀಲರು ಅಭ್ಯರ್ಥಿಯು ಕಳೆದ 3 ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಅವರು ಚಿತ್ತವಾಡಿ ಗ್ರಾಮದ ವಿಳಾಸವನ್ನು ಹೊಂದಿದ್ದಾರೆ ಆದರೆ ನಾಮಪತ್ರದಲ್ಲಿ ಚಿತ್ತ ಗ್ರಾಮವೆಂದು ಸುಳ್ಳು ಮಾಹಿತಿ ನೀಡಲಾಗಿದೆ ಎಂದು ದೂರು ಸಲ್ಲಿಕೆಯಾಗಿದೆ. ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ನೀಡಿದ್ದರೆ ಅ ಕುರಿತು ದೂರು ದಾಖಲಿಸುವ ಹಕ್ಕು ಚುನಾವಣಾ ಆಯೋಗಕ್ಕೆ ಮಾತ್ರ ಇದೆ, ಖಾಸಗಿ ವ್ಯಕ್ತಿಗಳಿಗಿಲ್ಲ ಎಂದು ವಾದಿಸಿದರು.
ಎರಡು ಪ್ರಕರಣಗಳ ವಾದ ವಿವಾದವನ್ನು ಆಲಿಸಿದ ಎಸಿಎಂಎಂನ ನ್ಯಾಯಪೀಠ, ಅಭ್ಯರ್ಥಿಯು ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಯಾವುದೇ ಲೋಪ ದೋಷಗಳು ಕಂಡು ಬಂದರೆ ಅಭ್ಯರ್ಥಿಗಳ ವಿರುದ್ಧ ದೂರು ದಾಖಲಿಸುವ ಹಕ್ಕು ಚುನಾವಣಾ ಆಯೋಗಕ್ಕೆ ಮಾತ್ರ ಇದೆ, ಖಾಸಗಿ ವ್ಯಕ್ತಿಗಳಿಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಲೋಕನಾಥ್ ಹೂಗಾರ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ