ಗ್ಯಾರಂಟಿಯೇ ಇಲ್ಲದ ಗ್ಯಾರಂಟಿ ಯೋಜನೆಗಳು..!

ಕಾಂಗ್ರೆಸ್ ಸರ್ಕಾರ ಹೇಗೆ ಅಧಿಕಾರದ ಗದ್ದುಗೆಯನ್ನು ಏರಿತ್ತು ಎಂದು ಒಬ್ಬ ಅನಕ್ಷರಸ್ಥನನ್ನ ಕೇಳಿದರೂ ಸಹ ಗ್ಯಾರಂಟಿ ಯೋಜನೆಗಳಿಂದಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು ಎಂದು ಹೇಳುತ್ತಾನೆ. ಕಾಂಗ್ರೆಸ್ ಸರ್ಕಾರ ಹೇಗಾದರೂ ಮಾಡಿ ಅಧಿಕಾರದ ಗದ್ದುಗೆನ ಏರಬೇಕು ಕಾಂಗ್ರೆಸ್ ಪಕ್ಷವನ್ನ ಮುನ್ನಡೆಗೆ ತರಬೇಕು ಎಂಬ ಕಾರಣಕ್ಕೆ ರಾಜ್ಯದ ಜನರನ್ನ ಸೆಳೆಯುವ, ಅವರ ವೋಟುಗಳನ್ನು ಪಡೆಯುವ ಸಲುವಾಗಿ ಕಾಂಗ್ರೆಸ್ ಹಿಂದುಮುಂದು ಯೋಚನೆಯನ್ನು ಮಾಡದೆ ʼಪಂಚ ಗ್ಯಾರಂಟಿʼ ಯೋಜನೆಗಳನ್ನ ನೀಡುವುದಾಗಿ ಚುನಾವಣಾ ಪೂರ್ವದಲ್ಲಿ ಮಾತನ್ನ ನೀಡಿತ್ತು. ಇದೆ ಪಂಚ ಗ್ಯಾರಂಟಿಗಾಗಿ ಜನರು ಮರುಳಾಗಿ ಕಾಂಗ್ರೆಸ್ ಸರ್ಕಾರವನ್ನು ಗೆಲ್ಲಿಸಿದ್ರು. ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ಪಂಚ್ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿತ್ತು. ಪ್ರಾರಂಭದಲ್ಲಿ ಈ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾದರೂ ಇತ್ತೀಚಿಗೆ ಹಳ್ಳ ಹಿಡಿಯುತ್ತಿವೆ. ಎಲ್ಲಾ ಖಾತೆಗಳಿಗೂ ಪಂಚ ಗ್ಯಾರಂಟಿ ಯೋಜನೆಗಳಡಿಯಲ್ಲಿ ಮಹಿಳೆಯರು, ಪದವಿ, ಡಿಪ್ಮೋಮಾ ಮುಗಿಸಿದ ವಿದ್ಯಾರ್ಥಿಗಳು, ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಹೆಚ್ಚುವರಿ ಅಕ್ಕಿ ಹಾಗೂ ರಾಜ್ಯದ ಎಲ್ಲಾ ಮಹಿಳಯರಿಗೆ ಶಕ್ತಿ ಯೋಜನೆ ಅಡಿಯಲ್ಲಿ ಫ್ರೀ ಬಸ್ ಟಿಕೆಟ್‌ಗಳನ್ನು ನೀಡಲಾಗಿತ್ತು. ಪಂಚ ಗ್ಯಾರಂಟಿ ಯೋಜನೆಗಳನ್ನು ನೀಡಿ ಕಾಂಗ್ರೆಸ್ ಸರ್ಕಾರ ಅಧಿಕಾರ ಪಡೆದಿದೆ ಎಂದು ವಿರೋಧ ಪಕ್ಷಗಳು ಆರೋಪವನ್ನ ಮಾಡುತ್ತಿದ್ದವು.

ಆದರೆ ಈಗ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಬೇಕು ಎಂದು ಪಕ್ಷದ ಒಳಗಿನವರೇ ಬಾಯಿ ಬಿಟ್ಟು ಮಾತನಾಡುತ್ತಿದ್ದಾರೆ ಸ್ವತಃ ಗೃಹ ಸಚಿವ ಜಿ ಪರಮೇಶ್ವರ್ ಇತ್ತೀಚಿಗೆ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಮಾತ್ರ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಕೊಡುವುದರ ಬಗ್ಗೆ ಮಾತನಾಡಿದರು. ಹತ್ತಿದ ಏಣಿಯನ್ನು ಒದೆಯುವ ಹಾಗೆ ಚುನಾವಣೆಯಲ್ಲಿ ಗೆದ್ದು ಬೀಗುವವರೆಗೆ ಗ್ಯಾರಂಟಿ ಯೋಜನೆಗಳು ಎಂಬ ಅಸ್ತ್ರವನ್ನು ಬಳಸಿಕೊಂಡು ಈಗ ಗೆದ್ದಾದ ಮೇಲೆ ಬಿಪಿಎಲ್ ನವರಿಗೆ ಮಾತ್ರ ಕೊಡುತ್ತೇನೆ ಎಂದು, ಉಳಿದವರಿಗೆ ಗ್ಯಾರಂಟಿ ಯೋಜನೆಗಳು ನೀಡುವುದಿಲ್ಲ ಎಂದು ಮಾತನ್ನ ಬದಲಾಯಿಸುವುದು ಎಷ್ಟು ಸರಿ? ಸರ್ಕಾರದ ಒಳಗಿನವರೆ ಈ ರೀತಿಯಾದಂತಹ ಹೇಳಿಕೆ ನೀಡುತ್ತಿರುವುದನ್ನು ನೋಡಿದರೆ ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ನೀಡುವುದಕ್ಕೆ ಸರ್ಕಾರ ಅಶಕ್ತವಾಗಿದೆ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಈಗ ಗೃಹ ಸಚಿವ ಪರಮೇಶ್ವರ್ ಅವರ ಹೇಳಿಕೆ ಹೇಗಿದೆ ಎಂದರೆ, ಹೊಳೆ ದಾಟಿದ ಮೇಲೆ ಅಂಬಿಗನ ಹಂಗ್ಯಾಕೆ ಎನ್ನುವ ಹಾಗೆ ಅಧಿಕಾರದ ಚುಕ್ಕಾಣಿನ ಹಿಡಿದ ಮೇಲೆ ಕಾಂಗ್ರೆಸ್ಸಗೆ ಯಾವುದೇ ಹಂಗು ಬೇಡ ಎನ್ನುವಂತಾಗಿದೆ. ಈಗ ಕಾಂಗ್ರೆಸ್ಸನವರಿಗೆ ಜನರ ವೋಟು ಅಗತ್ಯ ಇಲ್ಲ. ಚುನಾವಣೆ ಸಮಯದಲ್ಲಿ ಅವರಿಗೂ ಫ್ರೀ ಇವರಿಗೂ ಫ್ರೀ ಅಂತ ಬಡಾಯಿ ಕೊಚ್ಚಿಕೊಂಡು ಓಟು ಪಡೆದುಕೊಂಡು ಈಗ ಅವರಿಗೆ ಇಲ್ಲ, ಇವರಿಗೆ ಇಲ್ಲ ಎಂದು ಜನರನ್ನ ಪ್ರತ್ಯೇಕಿಸಿ ಮಾತನಾಡುತ್ತಿದ್ದಾರೆ. ಜನರನ್ನ ಯಾಮಾರಿಸಿ ಗ್ಯಾರಂಟಿ ಯೋಜನೆಗಳ ಆಸೆಯನ್ನು ಹುಟ್ಟಿಸಿ ಈಗ ಅವರನ್ನು ಮೂರ್ಖರನ್ನಾಗಿಸುತ್ತಿದೆ ಈ ಸರ್ಕಾರ. ಹೇಗಿದ್ದರೂ ಹಾಕಿದ ಓಟುಗಳನ್ನು ಪುನಃ ಪಡೆಯಲು ಸಾಧ್ಯವಿಲ್ಲ ಎಂಬುದು ಸರ್ಕಾರಕ್ಕೆ ಗೊತ್ತಿದೆ ಹಾಗಾಗಿ ಗ್ಯಾರಂಟಿ ಯೋಚನೆಗಳಿಗೆ ಕತ್ತರಿ ಹಾಕುವ ಕೆಲಸವನ್ನು ರೂಪಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಇದೆ ರೀತಿಯ ನಡೆಯನ್ನ ಮುಂದುವರೆಸಿದರೆ ಮುಂದೆ ಜನರ ಅಸಮಾಧಾನಕ್ಕೆ ಪಕ್ಷ ಗುರಿಯಾಗಬೇಕಾಗುತ್ತದೆ.
ಮೇಘಾ ಜಗದೀಶ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ