Alma Corner

ಯಾವ ಕಾಲಕ್ಕೆ ಯಾವ ಹಣ್ಣು ತಿನ್ನಬೇಕು ಗೊತ್ತಾ?

ನೀವು ಹಣ್ಣುಗಳ ಅಭಿಮಾನಿಯೇ? ಹಾಗಾದರೆ, ಯಾವ ಕಾಲದಲ್ಲಿ ಯಾವ ಹಣ್ಣು ಸೇವಿಸಿದರೆ, ಆರೋಗ್ಯಕರ ಎನ್ನುವುದು ಈ ಲೇಖನದ ಮುಖಾಂತರ ತಿಳಿದುಕೊಳ್ಳಿ.
ಭಾರತವು ಸಾಕಷ್ಟು ವೈವಿಧ್ಯತೆಯನ್ನು ಹೊಂದಿದೆ. ದೇಶದಲ್ಲಿ ನಾನಾರೀತಿಯ ಭೂರೂಪಗಳ ಇದ್ದ ಕಾರಣ, ವಿವಿಧ ವಾತಾವರಣಗಳನ್ನು ಅನುಭವಿಸಿಬಹದು. ಭಾರತದಲ್ಲಿ ಋತುಮಾನದ ಹಣ್ಣುಗಳು ಕ್ಲೈಮೇಟ್‌ ಮೇಲೆ ಹೆಚ್ಚು ಅವಲಂಬಿತವಾಗಿವೆ.
ನಮ್ಮ ದೇಶದಲ್ಲಿ ಹಲವಾರು ಋತುಮಾನದ ಹಣ್ಣುಗಳಿವೆ. ಇವುಗಳಲ್ಲಿ ಕೆಲವು ಹಣ್ಣುಗಳು ಬೇಸಿಗೆಯಲ್ಲಿ ಸಿಗೋದಾದರೆ, ಇನ್ನು ಕೆಲವು ಚಿಳಿಗಾಲದಲ್ಲಿ ಸಿಗತ್ತವೆ. ಈ ಲೇಖನದಲ್ಲಿ ನಾವು ಯಾವ ಕಾಲದಲ್ಲಿ ಯಾವ ಹಣ್ಣು ತಿಂದರೆ ಆರೋಗ್ಯಕರವಾಗಿ ಇರುತ್ತೇವೆ ಎಂದು ನೋಡೊಣ.
ಚಳಿಗಾಲದ ಹಣ್ಣುಗಳು:
ಚಳಿಗಾಲದಲ್ಲಿ ಭಾರತವು ಸಾಕಷ್ಟು ಹಣ್ಣುಗಳನ್ನು ಬೆಳೆಯುವುದಿಲ್ಲ ಎಂದು ನೀವು ಊಹಿಸಿದರೆ, ಅದು ತಪ್ಪು. ಚಳಿಗಾಲದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಬೆಳೆಯುವ ಕೆಲವ ಪ್ರಸಿದ್ಧ ಹಣ್ಣುಗಳು ಮತ್ತು ಅವುಗಳ ಪ್ರಯೋಜನಗಳು ಇಲ್ಲಿವೆ:

ಖರ್ಜೂರ:
a. ದೇಹವನ್ನು ಬೆಚ್ಚಗಿಡುತ್ತದೆ
b. ಸುಲಭ ಜೀರ್ಣಕ್ರಿಯೆ
c. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
d. ಉತ್ತಮ ಮೆದುಳಿನ ಆರೋಗ್ಯ

ಕಿವಿ ಹಣ್ಣು:
a. ಕಿವಿಯಲ್ಲಿರುವ ಫೈಬರ್‌ ಜೀರ್ಣಕಾರಿ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ.
b. ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ
c. ನಮ್ಮ ದೈನಂದಿನ ವಿಟಮಿನ್‌ ʼಸಿʼ ಅಗತ್ಯಗಳಲ್ಲಿ ಶೇ.೮೩ ರಷ್ಟು ಪೂರೈಸುತ್ತದೆ
d. ದೇಹದಲ್ಲಿ ಕಾಲಜನ್‌ ಅನ್ನು ಉತ್ಪಾದಿಸುತ್ತದೆ
e. ಮೊಡವೆಗಳಿಂದ ಮುಕ್ತಗೊಳಿಸುತ್ತದೆ.

ಕಿತ್ತಳೆ ಹಣ್ಣು:
a. ಮಧುಮೇಹ (sugar/diabetes) ಇದ್ದವರಿಗೆ ತುಂಬಾ ಪ್ರಯೋಜನಕಾರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
b. ರೋಗನಿರೋಧಕ ಶಕ್ತಿಯನ್ನು ಹಿಚ್ಚಿಸಲು ಸಹಾಯ ಮಾಡುತ್ತದೆ.
c. ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ
d. ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ
e. ಸೂರ್ಯದಿಂದ ಚರ್ಮವನ್ನು ರಕ್ಷಿಸುತ್ತದೆ

ದ್ರಾಕ್ಷಿ:
a. ಹೆಚ್ಚಿನ ನೀರು ಮತ್ತು ಫ್ಯಬರ್ ಅಂಶವು ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೀಜಿಸಲು ಸಹಾಯ ಮಾಡುತ್ತದೆ.
b. ಆಂಟಿಆಕ್ಸಿಡೆಂಟ್ಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತದೆ. ಇದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಗೆ ಗಮನಾರ್ಹ ಶಕ್ತಿಯನ್ನು ನೀಡುತ್ತದೆ.
c. ನೈಸರ್ಗಿಕ ಸಕ್ಕರೆಗಳನ್ನು ಹೊಂದಿದ್ದು, ತ್ವರಿತ ಶಕ್ತಿಯನ್ನು ನೀಡುತ್ತದೆ.
d. ಮೆಮೊರಿ ಮತ್ತು ಏಕಾಗ್ರತೆ ಸೇರಿದಂತೆ ಅರಿವಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
e. ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿದ್ದು, ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಸಪೋಟ:
a. ವಿಡಮಿನ್ಗಳ ಅಗರ: ೧೦೦ ಗ್ರಾಂ ಸಪೋಟದಲ್ಲಿ ೮೩ ಕ್ಯಾಲರಿ ಇದೆ. ವಿಟಮಿನ್ ಸಿ, ಎ, ನಿಯಾಸಿನ್, ಫಾಲಟೆ ಮತ್ತು ಖನಿಜಾಂಶ ಗಳಾಗಿರುವಂತಹ ಕಬ್ಬಿನಾಂಶ, ಪೊಟಾಶಿಯಂ ಮತ್ತು ತಾಮ್ರವಿದೆ.
b. ಗ್ಯಾಸ್ಟ್ರಿಕ್ ಹಾಗೂ ಹೊಟ್ಟೆಯ ಇತರ ಸಮಸ್ಯಗಳನ್ನು ಇದು ನಿವಾರಿಸುತ್ತದೆ
c. ಮುಳೆಗಳು ಬಲಗೊಳ್ಳುವುದು
d. ಪ್ರತಿರೋಧಕ ಶಕ್ತಿ ಹೆಚ್ಚಿಸುತ್ತದೆ

ಬೇಸಿಗೆಗಾಲದ ಹಣ್ಣುಗಳು:
ಇತ್ತಿಚಿನ ವರ್ಷಗಳಲ್ಲಿ ಬೇಸಿಗೆಗಾಲ ಅಸಹನೀಯವಾಗಿದೆ. ಸೂರ್ಯನ ಕಿರಣಗಳ ಶಾಖ ಮತ್ತು ತಾಪಮಾನ ಕೂಡ ಹಿಚ್ಚುತ್ತಿದೆ. ಇಂತಹ ಸಂಧರ್ಭದಲ್ಲಿ ನಾವು ಕೆಲವೊಂದು ಹಣ್ಣುಗಳನ್ನು ಸೇವಿಸಿದರೆ, ಆರೋಗ್ಯಕರವಾಗಿರಬಹುದು.

ಮಾವಿನ ಹಣ್ಣು:
a. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ
b. ಚರ್ಮವನ್ನು ಶುದ್ಧೀಕರಿಸುತ್ತದೆ
c. ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ
d. ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ
e. ದೇಹವನ್ನು ಕ್ಷಾರದಿಂದ ಕಾಪಾಡುತ್ತದೆ
f. ತೂಕ ಇಳಿಕೆಗೆ ಸಹಕಾರಿ
g. ಕಣ್ಣಿನ ಆರೋಗ್ಯಕ್ಕೆ ಉತ್ತಮ

ಕಲ್ಲಂಗಡಿ ಹಣ್ಣು:
a. ನಿರ್ಜಲೀಕರಣ ತಡೆಯಲು ಸಹಕಾರಿ
b. ಪೋಷಕಾಂಶ ಸಮೃದ್ಧ
c. ಆಂಟಿಕ್ಯಾನ್ಸರ್
d. ಹೃದಯದ ಆರೋಗ್ಯಕ್ಕೆ ಒಳ್ಳೆಯದು
e. ಕಣ್ಣಿನ ರಕ್ಷಣೆ
f. ಚರ್ಮದ ಆರೋಗ್ಯ ಸುಧಾರಣೆ

ನೇರಳೆ ಹಣ್ಣು:
a. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿ
b. ಜೀರ್ಣಕ್ರಿಯೆಉ ಸುಧಾರಣೆ
c. ರೋಗನಿರೋಧಕ ಶಕ್ತಿ ಹೆಚ್ಚಳ
d. ಕಣ್ಣಿನ ದೃಷ್ಟಿ ಸುಧಾರಿಸಲು ಸಹಕಾರಿ

ಪ್ಲಮ್:
a. ಮಲಬದ್ಧತ ನಿವಾರಿಸುವಲ್ಲಿ ಪ್ರಯೋಜನಕಾರಿ
b. ಹೃದಯದ ಆರೋಗ್ಯ
c. ಊತದ ಸಮಸ್ಯಗೆ ಪರಿಹಾರ
d. ರಕ್ತ ಪರಿಚಲನೆ ಸುಧಾರಣೆ
e. ದೃಷ್ಟಿ ಕಾಪಾಡುತ್ತದೆ
f. ಆಂಟಿಆಕ್ಸಿಡೆಂಟಗಳ ಸಮೃದ್ಧ
g. ಮೂಳೆಗಳ ಆರೋಗ್ಯ ಕಾಪಾಡುತ್ತದೆ

ಪಪ್ಪಾಯಿ ಹಣ್ಣು:
a. ಉರಿಯೂತವನ್ನು ಕಡಿಮೆ ಮಾಡುತ್ತದೆ
b. ಚರ್ಮದ ಆರೋಗ್ಯ ಸುಧಾರಣೆ
c. ತೂಕ ಇಳಿಕೆಗೆ ಇದು ಸಹಕಾರೆ
d. ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ
e. ಜೀರ್ಣಕ್ರಿಯೆಗೆ ಸಹಕಾರಿ

ಮಳೆಗಾಲದ ಹಣ್ಣುಗಳು:
ಮಳೆಗಾಲದಲ್ಲಿ ಬಹಳಷ್ಟು ಸೋಂಕುಗಳು, ಅಲರ್ಜಿಗಳು ಮತ್ತು ಗ್ಯಾಸ್ಟ್ರಿಕ್ ಸಮಸ್ಯಗಳು ಉಂಟುಯಾಗುತ್ತವೆ. ಹಾಗಾದರೆ, ಮಳೆಗಾಲದಲ್ಲಿ ಕೂಡ ಕೆಲವೊಂದು ಹಣ್ಣುಗಳನ್ನು ಸೇವಿಸಿದರೆ ಇಂತಹ ಸಮಸ್ಯೆಗಳಿಂದ ಪಾರಾಗಬಹುದು.

ಸೀತಾಫಲ:
a. ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ
b. ಚರ್ಮದ ಸೋಂಕುಗಳಿಗೆ ಚಿಕಿತ್ಸೆ ನೀಡುತ್ತದೆ
c. ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ
d. ಮಧುಮೇಹ ಲಕ್ಷಣಗಳನ್ನು ನಿಯಂತ್ರಿಸುತ್ತದೆ
e. ಮೆದುಳಿನ ಚಟುವಟಿಕೆಯನ್ನು ಹೆಚ್ಚಿಸುತ್ತದೆ
f. ಗಾಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ

ಸೇಬು:
a. ಫ್ರೀ ರಾಡಿಕಲ್ಗಳ ವಿರುದ್ಧ ಹೋರಾಡುತ್ತವೆ
b. ತೂಕ ನಿರ್ವಹಣೆ
c. ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ
d. ಉಸಿರಾಟದ ಸಮಸ್ಯೆಯನ್ನು ಪರಿಹರಿಸುತ್ತದೆ
e. ದೇಹವನ್ನು ಹೈಡ್ರೇಟ್ ಮಾಡುತ್ತದೆ

ಪೀಚ್ ಹಣ್ಣು:
a. ತೂಕ ನಷ್ಟದಲ್ಲಿ ಪರಿಣಾಮಕಾರಿ
b. ಕ್ಸಾನ್ಸರ್ ತಪ್ಪಿಸಲು ಸಹಕಾರಿ
c. ಮಲಬದ್ಧತೆಗೆ ಸಹಕಾರಿ
d. ಕೊಲೆಸ್ಟ್ರಾಲ್ ನಿಯಂತ್ರಣ
e. ಕೂದಲಿಗೆ ಪೀಚ್ ಒಳ್ಳೆಯದು
f. ಆಕ್ಸಿಡೇಟಿವ್ ಒತ್ತಡ ಸಮಸ್ಯಯನ್ನು ಕಡಿಮೆ ಮಾಡುತ್ತದೆ

ಬಾಳೆಹಣ್ಣು:
a.ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ
b.ದೇಹದ ಮುಳೆಗಳನ್ನು ಬಲಪಡಿಸುತ್ತದೆ
c .ಹೃದ್ರೋಗಿಗಳಿಗೆ ಒಳ್ಳೆಯದು
d.ರಕ್ತ ಹೀನತೆಯ ಸಮಸ್ಯಯನ್ನು ಪರಿಹರಿಸುತ್ತದೆ
e.ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ
f.ಬಾಳೆಹಣ್ಣು ಶಕ್ತಿಯ ಕೇಂದ್ರವಾಗಿದೆ
g.ಬಾಳೆಹಣ್ಣು ಪೋಷಕಾಂಶಗಳ ನಿಧಿ

ವಸಂತಗಾಲದ ಹಣ್ಣುಗಳು:
ಈ ಕಾಲದಲ್ಲಿ ಸಸ್ಯಗಳಲ್ಲಿ ತಾಜಾ ಎಲೆಗಳು ಬೆಳೆಯುತ್ತವೆ ಮತ್ತು ಪ್ರಕೃತಿಯು ಪುನಃ ತುಂಬಲು ಪ್ರಾರಂಭಿಸುತ್ತದೆ.

ಹಲಸಿನ ಹಣ್ಣು:
a. ನಿದ್ರಾಹೀನತೆ ನಿವಾರಣೆ
b. ಜೀರ್ಣಕ್ರಿಯೆ ಸುಧಾರಣೆ
c .ರಕ್ತೊದೊತ್ತಡ ಕಡಿಮೆ ಮಾಡುತ್ತದೆ
d .ಕಣ್ಣು ಮತ್ತು ಚರ್ಮವನ್ನು ರಕ್ಷಿಸುತ್ತದೆ
e .ಹುಣ್ಣು ನಿವಾರಣೆ
f .ಮೂಳೆಗೆ ಬಲ ಕೊಡುತ್ತದೆ

ಅನಾನಸ್:
a.ರೋಗ ನಿರೋಧಕ ಶಕ್ತಿ ಹೆಚ್ಚಳ
b.ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು
c .ಸೈನಸ್ ನಿವಾರಣೆಗೆ ಪರಿಣಾಮಕಾರಿಯಾದ ಮನೆಮದ್ದು
d.ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟುತ್ತದೆ
e.ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ
f.ಶೀತ ಮತ್ತು ಕೆಮ್ಮಿಗೆ ಉತ್ತಮ

ಲಿಚ್ಚಿ ಹಣ್ಣು:
a.ವೈರಸ್ ವಿರುದ್ಧ ಹೋರಾಡುತ್ತದೆ
b. ರಕ್ತ ಪರಿಚಲನೆ ಸುಧಾರಿಸುತ್ತದೆ
c. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
d.ಉರಿಯೂತವನ್ನು ಕಡಿಮೆ ಮಾಡುತ್ತದೆ.

ಋತುಮಾನದ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ. ಹಣ್ಣುಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿದ್ದು, ಅವು ಕಾಲಕ್ಕೆ ತಕ್ಕಂತೆ ನಮಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತವೆ. ಇವು ಆರೋಗ್ಯವನ್ನು ಕಾಪಾಡುವಲ್ಲಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ, ಚರ್ಮದ ತೇಜಸ್ಸು ಮತ್ತು ದೈಹಿಕ ಶಕ್ತಿಯನ್ನು ಉಳಿಸುವಲ್ಲಿ ಸಹಕಾರಿಯಾಗುತ್ತವೆ.
ಅಲ್ಲದೆ, ಸ್ಥಳೀಯ ಹಣ್ಣುಗಳನ್ನು ಖರೀದಿಸುವುದು ದೈಹಿಕ ಕಾರ್ಬನ್ ಅಟ್ಮಾಸ್ಫಿಯರ್ ಅನ್ನು ಕಡಿಮೆ ಮಾಡುತ್ತದೆ ಮತ್ತು ಸ್ಥಳೀಯ ರೈತರಿಗೆ ಆರ್ಥಿಕವಾಗಿ ಸಹಾಯ ನೀಡುತ್ತದೆ. ಹೀಗಾಗಿ, ಪ್ರತಿಯೋಬ್ಬರೂ ತಾವು ತಿನ್ನುವ ಆಹಾರಕ್ಕೆ ಮಹತ್ವ ನೀಡಿ, ಹಣ್ಣುಗಳನ್ನು ಕಾಲಕ್ಕೆ ತಕ್ಕಂತೆ ಆಯ್ಕೆ ಮಾಡುವುದು ಉತ್ತಮ ಆರೋಗ್ಯಕ್ಕೆ ಸಹಾಯವಾಗುತ್ತದೆ.

ಧನ್ಯಾ ರೆಡ್ಡಿ ಎಸ್‌

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿನಿ

Show More

Related Articles

Leave a Reply

Your email address will not be published. Required fields are marked *

Back to top button