Alma Corner

ಕೆಪಿಎಸ್‌ಸಿ ಪರೀಕ್ಷೆಯಲ್ಲಿ “ಅಕ್ರಮ” ಕೇಳಿದರೆ ನೀವೂ ಶಾಕ್..!

ಸಾಕ್ಷಿ ಸಮೇತ ಸದನದ ಮುಂದಿಟ್ಟ ವಿಪಕ್ಷ ನಾಯಕ ಆರ್.‌ ಅಶೋಕ.

ಬೆಂಗಳೂರು: ಎಷ್ಟೋ ಬಡ, ಹಾಗೂ ಮಧ್ಯಮ ವರ್ಗದ ಅಭ್ಯರ್ಥಿಗಳು ಹಗಲು-ರಾತ್ರಿ ಓದಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ, ನಾನು ಸಹ ಸಾರ್ವಜನಿಕ ಸೇವಾ ಇಲಾಖೆಗಳಲ್ಲಿ ಸೇವೆ ಸಲ್ಲಿಸಬಹುದೆಂದು ಫಲಿತಾಂಶಕ್ಕಾಗಿ ಕಾಯುತ್ತಾ ಕುಳಿತಿರುತ್ತಾರೆ.

ಆದರೆ ಪರೀಕ್ಷೆಯಲ್ಲಿ ನಡೆಯುವುದೆ ಬೇರೆ ಅದರ ಅರಿವು ಸಹ ಬಡ, ಹಾಗೂ ಮಧ್ಯಮ ವರ್ಗದ ಅಭ್ಯರ್ಥಿಗಳಿಗೆ ತಿಳಿದಿರಿವುದಿಲ್ಲ, “ಕಾಸಿದ್ದವರಿಗೆ ಕಜ್ಜಾಯ ಎನ್ನುವಂತಾಗಿದೆ” ಕೆಪಿಎಸ್‌ಸಿ ಇಲಾಖೆ ನಡೆಸುವ ಪರೀಕ್ಷೆಯ ರೀತಿ. ಇತ್ತಿಚೆಗೆ ಸರ್ಕಾರದ ವಿರುದ್ದ ಸಾಕಷ್ಟು ಅಭ್ಯರ್ಥಿಗಳು ಮುಷ್ಕರ ಹಾಗೂ ಧರಣಿ ನಡೆಸಿದರು, ಸರ್ಕಾರ ಮಣಿಯಲಿಲ್ಲ, ಹಗಲು-ರಾತ್ರಿ ಓದಿ ಚೆನ್ನಾಗಿ ಪರೀಕ್ಷೆ ಬರೆದು ನಾನು ಈ ಬಾರಿ ಖಂಡಿತ  ಕೆಪಿಎಸ್‌ಸಿಗೆ ಆಯ್ಕೆ ಆಗುವೆ ಎಂದು ಅಭ್ಯರ್ಥಿಗಳು ಕಂಡ ಕನಸಿಗೆ ಕೆಪಿಎಸ್‌ಸಿ ಇಲಾಖೆ ಒಳಗಿರುವ ಕಳ್ಳರೆ ಅಭ್ಯರ್ಥಿಗಳ ಆಸೆಗೆ ಕೊಳ್ಳಿ ಇಟ್ಟಿದ್ದಾರೆ, ಹಣವಂತ ಅಭ್ಯರ್ಥಿಗಳು ಬಿಸಾಕುವ ಎಂಜಲು ಹಣಕ್ಕೆ ಕೈ ಒಡ್ಡಿ ವಿದ್ಯಾವಂತ ಅಭ್ಯರ್ಥಿಗಳ ಭವಿಷ್ಯವನ್ನೆ ಈ ಕೆಪಿಎಸ್‌ಸಿ ಭ್ರಷ್ಟರು ಹಾಳುಮಾಡುತ್ತಿದ್ದಾರೆ.

ಸದನದಲ್ಲಿ ಕೆಪಿಎಸ್‌ಸಿ ಕರ್ಮಕಾಂಡವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ವಿಪಕ್ಷ ನಾಯಕ ಆರ್.‌ ಅಶೋಕ ಆ ಭ್ರಷ್ಟರು ಹೇಗೆ ಹಣ ಕೊಟ್ಟವರನ್ನು ಮಾತ್ರ ಪರೀಕ್ಷೆಯಲ್ಲಿ ಉತ್ತಿರ್ಣರನ್ನಾಗಿಸಿ ಮತ್ತೆ ಅವರಂತ ಭ್ರಷ್ಟರನ್ನೆ ಸಾರ್ವಜನಿಕ ವಲಯಕ್ಕೆ ಅಧಿಕಾರಿಗಳ ರೂಪದಲ್ಲಿ ದೂಡುತ್ತಿದ್ದಾರೆ ಅವರಿಂದ ಹೇಗೆ ನಾವು ಒಳ್ಳೆಯ ಸೇವೆಯನ್ನು ನಿರೀಕ್ಷಿಸಲು ಹೇಗೆ ಸಾದ್ಯ ಎಂಬ ಕರಾಳ ಸತ್ಯವನ್ನು ಬಿಚ್ಚಿಟ್ಟರು.

ಕೆಪಿಎಸ್‌ಸಿಯ ಒಳಗೆ ಕೆಲಸ ನಿರ್ವಹಿಸುವ ಈ ಭ್ರಷ್ಟರು ಪರೀಕ್ಷೆ ನಡೆಯುವ ಮುಂಚೆ ಕೆಲ ಹಣವಂತ ಅಭ್ಯರ್ಥಿಗಳ ಬಳಿ ಹಣ ಪಡೆದು ಅವರಿಗೆ ಪರೀಕ್ಷೆಯಲ್ಲಿ ಹೇಗೆಲ್ಲಾ ಉತ್ತರಿಸಬೇಕು ಹಾಗೂ ಹೇಗೆಲ್ಲಾ ಉತ್ತರಿಸಬಾರದು ಎಂದು ಅವರಿಗೆ ಮುಂಚೆಯೆ ತಿಳಿಸಿರುತ್ತಾರೆ ಅವರ ಅಣತಿಯಂತೆ ಹಣ ನೀಡಿರುವ ಅಭ್ಯರ್ಥಿಗಳು ಪ್ರಶ್ನೆಪತ್ರಿಕೆಯಲ್ಲಿ ಅವರಿಗೆ ಶೇ.100 ಪ್ರತಿಷತ ತಿಳಿದಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಬೇಕೆ ಹೊರತು ಬೇರೆ ಯಾವ ಪ್ರಶ್ನೆಗಳಿಗೂ ಉತ್ತರ ನೀಡುವಂತಿಲ್ಲ ನಂತರ ಅವರು ಬಿಟ್ಟ ಪ್ರಶ್ನೆಗಳನ್ನು ಸಿಸಿಟಿವಿ ಇಲ್ಲದ ಕೊಠಡಿಗೆ ತೆಗೆದುಕೊಂಡುಹೋಗಿ ಮಿಕ್ಕ ಎಲ್ಲ ಪ್ರಶ್ನೆಗಳಿಗೆ ಆ ಭ್ರಷ್ಟರು ಉತ್ತರಿಸಿ ಅದನ್ನು ಪರೀಕ್ಷಾಧಿಕಾರಿಗೆ ಹಿಂದಿರುಗಿಸುತ್ತಾರೆ ಹೀಗೆ ದುಡ್ಡು ಕೊಟ್ಟವರು ಪಾಸಾದರೆ ಹಣ ನೀಡದೆ ಪರೀಕ್ಷೆಯನ್ನು ಬರೆದ ವಿದ್ಯಾವಂತ ಅಭ್ಯರ್ಥಿಗಳು ಹಾಗೆಯೇ ಉಳಿಯುತ್ತಿದ್ದಾರೆ, ಸಬ್ಇನ್ಸ್ಪೆಕ್ಟರ್ ಹುದ್ದೆಗೆ ಹಾಗೂ ಪ್ರಿಲಿಮೆನರಿ ಹಾಗೂ ಇನ್ನಿತರ ಹುದ್ದೆಗಳಿಗೆ ಒಂದೊಂದು ರೇಟ್‌ಕಾರ್ಡ್‌ ಇದೆ ಈ ರೇಟ್‌ಕಾರ್ಡ್‌ ಸಂಸ್ಕೃತಿಯನ್ನು ಕಿತ್ತೆಸೆಯುವ ಕೆಲಸ ಸರ್ಕಾರ ಮಾಡಬೇಕೆಂದರು, ಎಂದು ಆರ್. ಅಶೋಕ‌ ಕಿಡಿಕಾರಿದರು.

ಸದ್ಯ ಕೆಪಿಎಸ್‌ಸಿಯ ವಿರುದ್ದದ ಹೋರಾಟದಲ್ಲಿ ಕರವೇ(ಕಾರ್ನಾಟಕ ರಕ್ಷಣಾ ವೇದಿಕೆ)ಯು ಸಹ ಕೈ ಜೋಡಿಸಿದ್ದು ಎನಾಗಲಿದೆ ಎಂದು ಕಾದುನೋಡಬೇಕಿದೆ.

Show More

Related Articles

Leave a Reply

Your email address will not be published. Required fields are marked *

Back to top button