Alma Corner

ಭಾರತ ರಕ್ಷಣಾ ವಿಭಾಗದಲ್ಲಿ ಸ್ವಾವಲಂಬಿಯಾಗಲು ಇನ್ನೆಷ್ಟು ಸಮಯ ಬೇಕು..!?

            ಜಾಗತಿಕ ಸಮೀಕರಣಗಳು ಕಾಲಕಾಲಕ್ಕೆ ಬದಲಾಗುತ್ತಾ ಇರುತ್ತವೆ. geopoliticsನಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ. ಕಾಲಕಾಲಕ್ಕೆ, ಅವತ್ತಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ಅವು ಬದಾಲಾಗ್ತಾ ಇರ್ತವೆ. ಅವತ್ತಿನ ಪರಿಸ್ಥಿತಿಗಳಿಗೆ ಅನುಗುಣವಾಗಿ ನಾವು ಬದಲಾಗ್ತಾ ಇರ್ಬೇಕು. ರಾಜತಾಂತ್ರಿಕವಾಗಿ ಇತರ ದೇಶಗಳೊಡನೆ ನಮ್ಮ ಸಂಬಂಧಗಳು ಹದಗೆಡದಂತೆ ನಮ್ಮ ಕಾರ್ಯತಂತ್ರಗಳನ್ನ ರೂಪಿಸ್ತಾ ಇರ್ಬೇಕು. ರಾಜತಾಂತ್ರಿಕ ಸಂಬಂಧಗಳನ್ನು ನಿಭಾಯಿಸಬೇಕಾದ ಸಂದರ್ಭದಲ್ಲಿ ನಾವು ಕೆಲವೊಮ್ಮೆ ಅಡಕತ್ತರಿಯಲ್ಲಿ ಸಿಕ್ಕಿ ಹಾಕ್ಕೊಂಡು ಬಿಡ್ತೇವೆ. ಈಗ ಭಾರತದ ಸ್ಥಿತಿಯೂ ಸದ್ಯ ಅದೇ ರೀತಿ ಆಗಿದೆ.

         ಭಾರತ ಸ್ವತಂತ್ರಗೊಂಡು 75 ವರ್ಷಗಳೇ ಕಳೆದ್ರೂ, ನಮಗಿನ್ನೂ ರಕ್ಷಣಾ ಕ್ಷೇತ್ರದಲ್ಲಿ ಸಂಪೂರ್ಣ ಸ್ವಾವಲಂಬನೆ ಸಾಧಿಸೋಕೆ ಸಾಧ್ಯ ಆಗಿಲ್ಲ. ನಾವು ಮೇಕ್ ಇನ್ಇಂಡಿಯಾ, ವೋಕಲ್ಫಾರ್ಲೋಕಲ್ಹೀಗೆ, ಎಷ್ಟೇ ಕಾರ್ಯಕ್ರಮಗಳನ್ನ ಹಮ್ಮಿಕೊಂಡ್ರೂ, ರಕ್ಷಣಾ ಉಪಕರಣಗಳ ವಿಷಯಕ್ಕೆ ಬಂದಾಗ, ವಿದೇಶಗಳ ಮೇಲಿನ ನಮ್ಮ ಅವಲಂಬನೆ ಮಾತ್ರ ಸಂಪೂರ್ಣ ಕಡಿಮೆ ಆಗಿಲ್ಲ. ಭಾರತ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸೋಕೆ ಎಷ್ಟೇ ಪ್ರಯತ್ನ ಪಟ್ರೂ, ಅಂದುಕೊಂಡಷ್ಟು ಯಶಸ್ಸು ನಮಗೆ ಸಿಕ್ತಿಲ್ಲ!

            ಸೈನಿಕರಿಗೆ ಅಗತ್ಯವಾಗಿರೋ ಮಶಿನ್ಗನ್ʼಗಳು, ಕ್ಷಿಪಣಿಗಳು, ಯುದ್ಧ ಟ್ಯಾಂಕರ್‌ʼಗಳು, ಏರ್ಡಿಫೆನ್ಸ್ಸಿಸ್ಟಂಗಳು, ಯುದ್ಧ ವಿಮಾನಗಳು, ಯುದ್ಧ ನೌಕೆಗಳು, ಸಬ್‌ʼಮರೀನ್‌ʼಗಳು, ಗಡಿ ಕಾವಲಿಗೆ ನೆರವಾಗೋ ಡ್ರೋನ್‌ʼಗಳು, ಫಿರಂಗಿಗಳು ಹೀಗೆ, ರಕ್ಷಣಾ ಕೇತ್ರದಲ್ಲಿ ಹಲವು ವಿಧದ ಯುದ್ದೋಪಕರಣಗಳ ತಯಾರಿಕೆ ಸ್ವದೇಶೀಯಾಗಿ ನಡೆಯಬೇಕಿದೆ. ಆದರೆ ಇಷ್ಟರಲ್ಲಿ ಕೆಲವೇ ಕೆಲವು ವಿಧಧ ಯುದ್ದೋಪಕರಣಗಳನ್ನು ಮಾತ್ರ ನಾವು ಸದ್ಯ ದೇಶೀಯವಾಗಿ ತಯಾರಿಸ್ತಾ ಇದ್ದೇವೆನಮ್ಮಲ್ಲಿ ಯುದ್ದೋಪಕರಣಗಳ ತಯಾರಿಕೆಗೆ ಅಗತ್ಯವಾದ ಸಾಕಷ್ಟು ಮಾನವ ಸಂಪನ್ಮೂಲ ಲಭ್ಯವಿದ್ರೂ, ಕೆಲವೊಂದು ಆಯುಧಗಳನ್ನು ಸ್ವದೇಶೀಯವಾಗಿ ತಯಾರಿಸೋಕೆ ಬೇಕಾದ ತಂತ್ರಜ್ನಾನ ನಮ್ಮಲ್ಲಿ ಲಭ್ಯವಿಲ್ಲ. ಉದಾಹರಣೆಗೆ ಜಗತ್ತು  5ನೇ ತಲೆಮಾರಿನ(5th generation) ಯುದ್ಧ ವಿಮಾನ ತಯಾರಿಯನ್ನು ಮುಗಿಸಿ 6th generation ಯುದ್ಧ ವಿಮಾನಗಳನ್ನು ತಯಾರಿಸುತ್ತಿದ್ದರೂ, ನಮಗಿನ್ನೂ ನಮ್ಮ ಸ್ವಂತ 5ನೇ ತಲೆಮಾರಿನ ಯುದ್ದ ವಿಮಾನ ಹೊಂದೋಕೆ ಸಾಧ್ಯವಾಗಿಲ್ಲ. ಕಾರಣ ಯುದ್ಧ ವಿಮಾನಕ್ಕೆ ಅಗತ್ಯವಾಗಿ ಬೇಕಾದ ಜೆಟ್ಎಂಜಿನ್‌ʼನ್ನು ಸ್ವದೇಶೀಯವಾಗಿ ತಯಾರಿಸೋಕೆ ನಮಗೆ ಸಾಧ್ಯವಾಗ್ತಿಲ್ಲ. ವಿಮಾನದ ಇತರ ಬಿಡಿಭಾಗಗಳನ್ನು ನಮ್ಮಲ್ಲೇ ತಯಾರಿಸಿಕೊಂಡರೂ, ಅದರ ಎಂಜಿನ್‌ʼಗಾಗಿ ನಾವು ಇತರ ದೇಶಗಳನ್ನು ಅವಲಂಬಿಸಬೇಕಾಗಿದೆ. ನಮ್ಮಲ್ಲಿ ʼಕಾವೇರಿʼ ಎಂಬ ಜೆಟ್ಎಂಜಿನ್‌ʼ ಪರೀಕ್ಷೆ ದಶಕಗಳಿಂದ ನಡೆಯುತ್ತಿದ್ದರೂ, ಅದರ ಪರೀಕ್ಷೆ ಇನ್ನೂ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಇದರಿಂದ ಭಾರತ ʼತೇಜಸ್‌ʼ ಎಂಬ ಸ್ವದೇಶೀ ಯುದ್ಧ ವಿಮಾನವನ್ನು ನಿರ್ಮಿಸಿದ್ದರೂ, ಅದರ ಎಂಜಿನ್‌ʼಗಾಗಿ ನಾವು ಬೇರೆ ದೇಶಗಳನ್ನ ಅವಲಂಬಿಸಬೇಕಾಗಿದೆ. “ನಾವು ಕಳೆದ 40 ವರ್ಷಗಳಲ್ಲಿ 40 ತೇಜಸ್ಯುದ್ಧ ವಿಮಾನಗಳನ್ನ ತಯಾರಿಸೋಕೆ ಸಾಧ್ಯವಾಗಿಲ್ಲ!!” ಇದು ಭಾರತದ ವಾಯುಸೇನಾ ಮುಖ್ಯಸ್ಥರ ಹೇಳಿಕೆ. ಅಂದ್ರೆ ನಮ್ಮ ಸ್ವದೇಶೀ ಯುದ್ಧ ವಿಮಾನಗಳ ತಯಾರಿಕಾ ಕಾರ್ಯಕ್ರಮ ಯಾವ ರೀತಿ ನಡೀತಿದೆ ಅನ್ನೋದನ್ನ ಊಹಿಸಿಕೊಳ್ಳಬಹುದು! ನಮ್ಮ ವಾಯುಪಡೆಗೆ 5-6 sqadran ಯುದ್ಧ ವಿಮಾನಗಳ ಅಗತ್ಯ ತುರ್ತಾಗಿ ಇದೆ. ಆದರೆ ಬೇಡಿಕೆಗೆ ಅನುಗುಣವಾಗಿ ತೇಜಸ್ವಿಮಾನವನ್ನು ಪೂರೈಸೋದು ನಮ್ಮ HALಗೆ ಸಾಧ್ಯವಾಗ್ತಾ ಇಲ್ಲ. ನಮ್ಮ ಸ್ವದೇಶೀ 5ನೇ ತಲೆಮಾರಿನ ಯುದ್ಧ ವಿಮಾನ ತಯಾರಿಕಾ ಪ್ರಾಜೆಕ್ಟ್‌ ʼAMCAʼ ತಯಾರಿ ಇನ್ನೂ ಕುಂಟುತ್ತಾ ಸಾಗಿದೆ. ಕೆಲವು ರಕ್ಷಣಾ ತಜ್ನರ ಪ್ರಕಾರ, AMCA ಸಂಪೂರ್ಣವಾಗಿ ರೆಡಿಯಾಗಿ, ಅದರ ಒಂದು squadran ನಮ್ಮ ವಾಯುಸೇನೆಗೆ ಸೇರ್ಪಡೆಯಾಗೋಕೆ ಕನಿಷ್ಠ 15 ವರ್ಷ ಬೇಕಾಗ್ಬಹುದಂತೆ!! ಕೊರತೆಯನ್ನು ನೀಗಿಸಿಕೊಳ್ಳೋಲೆ ಅಂತಲೇ ಭಾರತ ಫ್ರಾನ್ಸ್ಜೊತೆ ಒಪ್ಪಂದ ಮಾಡ್ಕೊಂಡು, 4.5 ನೇ ತಲೆಮಾರಿನ ಯುದ್ಧ ವಿಮಾನವಾದ ʼರಫೇಲ್‌ʼನ್ನು ಖರೀದಿಸಿದೆ.

          ನಮ್ಮ ಪಕ್ಕದ ಶತ್ರು ಚೈನಾ, ಈಗಾಗಲೇ ತನ್ನ ವಾಯುಸೇನೆಯನ್ನು ಸಾಕಷ್ಟು ಬಲಿಷ್ಠಗೊಳಿಸಿದೆ. ಚೈನಾ 5ನೇ ತಲೆಮಾರಿನ ಯುದ್ಧ ವಿಮಾನಗಳ ತಯಾರಿಕೆಯನ್ನು ಮುಗಿಸಿ, ಈಗಾಗಲೇ 6ನೇ ತಲೆಮಾರಿನ ಯುದ್ಧ ವಿಮಾನದ ಮಾದರಿಯೊಂದನ್ನು ಜಗತ್ತಿನೆದುರು ಪ್ರದರ್ಶಿಸಿದೆ. ನಮ್ಮ ನೌಕಾದಳಕ್ಕೆ ಹೋಲಿಸಿದರೆ, ಚೈನಾದ ನೌಕಾಸೇನೆ ತೀರಾ ಬಲಿಷ್ಠವಾಗಿದೆ. ನಾವು ನಮ್ಮ ಸಬ್‌ʼಮೆರಿನ್‌ʼಗಳ ವಿಷಯದಲ್ಲಿ ಈಗೀಗ 20 ಗಡಿಯನ್ನು ಮುಟ್ಟುತ್ತಿದ್ದರೆ, ಚೈನಾ ಅದಾಗಲೇ 60 ಕ್ಕೂ ಹೆಚ್ಚು ಸುಸಜ್ಜಿತ submarineಗಳನ್ನ ಹೊಂದಿದೆ. ಅವುಗಳಲ್ಲಿ ಹಲವು nuclear capable submarineಗಳು ಅನ್ನೋದು ಗಮನಿಸ್ಬೇಕಾದ ವಿಷಯ. ಅಮೆರಿಕಾದ ರೀತಿ ತಾನೊಂದು ಜಾಗತಿಕ ಶಕ್ತಿಯಾಗಬೇಕು ಅನ್ನೋ ಮಹದಾಸೆ ಹೊಂದಿರೋ ಚೈನಾ, ಎಲ್ಲ ರೀತಿಯಲ್ಲೂ ಅಮೆರಿಕಾಕ್ಕೆ ಪೈಪೋಟಿ ನೀಡುವಂತೆ ತನ್ಸೇನಾ ಸಾಮರ್ಥೈವನ್ನು ಹೆಚ್ಚಿಸಿಕೊಳ್ತಾ ಇದೆ. ಆದರೆ ನಮ್ಮಲ್ಲಿ ರಕ್ಷಣಾ ಕ್ಷೇತ್ರಕ್ಕೆ ಅಗತ್ಯವಿರುವಷ್ಟು ಅನುದಾನ ಯಾವ ಬಜೆಟ್‌ʼನಲ್ಲೂ ಸಿಕ್ತಿಲ್ಲ. ಭಾರತದ ರಕ್ಷಣಾ ಬಜೆಟ್‌ʼನಲ್ಲಿ ಬಹುಪಾಲು ಸೈನಿಕರ ವೇತನ, ಮಾಜಿ ಯೋಧರಿಗೆ ಪಿಂಚಣಿ ಇಂಥವುಗಳಲ್ಲೇ ಕಳೆದು ಹೋಗ್ತಿದೆ. ಹಾಗಾಗಿ ನಮ್ಮ ಸೈನ್ಯ ಕೇಳುವ ಅನುದಾನದಲ್ಲಿ, ಸರ್ಕಾರದಿಂದ ಸಿಗುವುದೇ ಅತ್ಯಲ್ಪ. ಇದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ!

              ಈಗ ಭಾರತ ಎರಡು ಜಾಗತಿಕ ಶಕ್ತಿಗಳನ್ನು ಬ್ಯಾಲೆನ್ಸ್ಮಾಡಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದೆ. ಸೋವಿಯತ್ಯೂನಿಯನ್ಕಾಲದಿಂದಲೂ ಭಾರತದ ಮಿತ್ರರಾಷ್ಟ್ರವಾಗಿರೋ ರಷ್ಯಾ ಒಂದು ಕಡೆಯಾದ್ರೆ, ಚೈನಾವನ್ನು ಕೌಂಟರ್ಮಾಡೋಕೆ ಭಾರತದ ಸಹಾಯ ಅಗತ್ಯ ಅನ್ನೋದನ್ನ ಮನಗಂಡಿರೋ ಅಮೆರಿಕಾ ಇನ್ನೊಂದ್ಕಡೆ. ನಮ್ಮ ಯುದ್ಧೋಪಕರಣಗಳಲ್ಲಿ ಸುಮಾರು 70% ರಷ್ಯಾ ನಿರ್ಮಿತವೇ ಆಗಿವೆ. ಅದರಲ್ಲಿ ಮುಖ್ಯವಾಗಿ ನಮ್ಮ ವಾಯುಸೇನೆಯಲ್ಲಿ ಬಳಕೆಯಲ್ಲಿರೋ ಪ್ರಮುಖ ಯುದ್ಧ ವಿಮಾನಗಳಾದ ಸುಖೋಯ್‌ʼ ಮಿರಾಜ್, ಮಿಗ್ಇವೆಲ್ಲವೂ ರಷ್ಯಾ ನಿರ್ಮಿತ ಯುದ್ಧ ವಿಮಾನಗಳೇ ಆಗಿವೆ. ಅಷ್ಟೇ ಅಲ್ಲ, ವಿಶ್ವದಲ್ಲೇ ಅತ್ಯಂತ ವೇಗದ Supersonic ಕ್ಷಿಪಣಿಯಾದ ʼಬ್ರಹ್ಮೋಸ್‌ʼ ಕ್ಷಿಪಣಿಯನ್ನು ಕೂಡಾ ಭಾರತರಷ್ಯಾ ಜಂಟಿಯಾಗಿಯೇ ತಯಾರಿಸಿರೋದು. ಹೀಗೆ ರಕ್ಷಣಾ ಕ್ಷೇತ್ರದಲ್ಲಿ ರಷ್ಯಾದ ಮೇಲೆ ನಮ್ಮ ಅವಲಂಬನೆ ಅತಿಯಾಗಿರೋದ್ರಿಂದ, ಸುಲಭವಾಗಿ ಭಾರತಕ್ಕೆ ಇದರಿಂದ ಹೊರಗಡೆ ಬರೋದು ಸಾಧ್ಯವಿಲ್ಲ. ಹಾಗಾಗಿ ರಷ್ಯಾಯುಕ್ರೇನ್ಯುದ್ಧದ ಕಾರಣಕ್ಕೆ, ರಷ್ಯಾದ ಜೊತೆ ವ್ಯಾಪಾರವನ್ನ ಭಾರತ ಬಹಿಷ್ಕರಿಸಬೇಕು ಎಂಬ ತೀವ್ರ ಒತ್ತಡ ಪಶ್ಚಿಮದ ಜಗತ್ತಿನಿಂದ ಬಂದರೂ, ಭಾರತ ರಷ್ಯಾದ ಜೊತೆಗಿರುವ ವ್ಯಾಪಾರವನ್ನು ನಿಲ್ಲಿಸಿಲ್ಲ. ಅಷ್ಟೇ ಅಲ್ಲ, ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ಕೈಗೊಳ್ಳಲಾದ ಯಾವ ನಿರ್ಣಯವನ್ನೂ ಭಾರತ ಬೆಂಬಲಿಸಿಲ್ಲ. ಇದು ಪಾಶ್ಚಿಮಾತ್ಯ ರಾಷ್ಟ್ರಗಳ ಸಿಟ್ಟಿಗೂ ಕಾರಣವಾಗಿತ್ತು. ಭಾರತದ ಮೇಲೆ ಒತ್ತಡ ಹೇರೋಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪಿತೂರಿಗಳು ನಡೆದವು. ಆದರೆ ಅವ್ಯಾವುದಕ್ಕೂ ಬಗ್ಗದ ಭಾರತ ರಷ್ಯಾವನ್ನು ಬಿಟ್ಟುಕೊಡ್ಲಿಲ್ಲ.

             ಇನ್ನು ಅಮೆರಿಕಾದ ಜೊತೆಗೂ ನಮಗೆ ರಕ್ಷಣಾ  ಒಪ್ಪಂದಗಳಿವೆ. ಚೈನಾವನ್ನು ಕೌಂಟರ್ಮಾಡೋಕೆ ಅಮೆರಿಕಾಗೆ ಭಾರತದ ಅಗತ್ಯವಿದೆ. ಹಾಗಾಗಿ ಈಗ ಚೈನಾದ ವಿರುದ್ಧ ಅಮೆರಿಕಾ ಭಾರತವನ್ನು ಬೆಂಬಲಿಸ್ತಿದೆ. ಈಗ ಭಾರತದ ಬತ್ತಳಿಕೆಯಲ್ಲಿ ನಿರ್ಮಿತ ಅಪಾಚೆ ಹೆಲಿಕಾಪ್ಟರ್‌ʼಗಳು, C-17 globemaster, chinook ಹೆಲಿಕಾಪ್ಟರ್‌ʼಗಳು, ಕ್ಷಿಪಣಿಗಳು ಹೀಗೆ, ಹಲವು ಅಮೆರಿಕ ನಿರ್ಮಿತ ಆಯುಧಗಳಿವೆ. ಚೈನಾವನ್ನು ಸಂಪೂರ್ಣವಾಗಿ ಕಟ್ಟಿಹಾಕೋಕೆ ಅಮೆರಿಕ ರಚಿಸಿರುವ quad ಕೂಟದಲ್ಲಿ ಭಾರತ ಸದಸ್ಯ ರಾಷ್ಟ್ರವಾಗಿದೆ. ಹಾಗಾಗಿ ಕಡೆ ಅಮೆರಿಕಾವನ್ನೂ ಸಂಪೂರ್ಣವಾಗಿ ದೂರ ಇಡೋಕೆ ಭಾರತಕ್ಕೆ ಸಾಧ್ಯವಾಗ್ತಾ ಇಲ್ಲ!!

                  ಈಗ ಭಾರತ 5ನೇ ತಲೆಮಾರಿನ ಯುದ್ಧವಿಮಾನದ ಆಯ್ಕೆಯಲ್ಲಿಯೂ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ. ಒಂದೆಡೆ ರಷ್ಯಾ ತನ್ನ 5ನೇ ತಲೆಮಾರಿನ ಯುದ್ಧ ವಿಮಾನವಾದ ಸುಖೋಯ್ಸುʼ-57ʼ ನ್ನು ಭಾರತಕ್ಕೆ ಆಫರ್ಮಾಡಿದೆ. ಜೊತೆಗೆ ಅದರ complete transfer of technologyಯನ್ನು ಕೂಡ ಮಾಡ್ತೀವಿ ಅನ್ನೋ ಭರವಸೆಯನ್ನು ಕೂಡ ನೀಡ್ತಿದೆ ರಷ್ಯಾ. ಜೊತೆಗೆ ಅಮೆರಿಕ ತನ್ನ 5 ನೇ ತಲೆಮಾರಿನ ಯುದ್ಧ ವಿಮಾನವಾದ ʼF-35ʼ ನ್ನು ಕೂಡ ಭಾರತಕ್ಕೆ ಆಫರ್ಮಾಡ್ತಿದೆಆದರೆ ರಷ್ಯಾದ ಯುದ್ಧ ವಿಮಾನಕ್ಕೆ ಹೋಲಿಸಿದ್ರೆ, ಅಮೆರಿಕದ ಯುದ್ಧ ವಿಮಾನದ ವೆಚ್ಚ ತೀರ ಅಧಿಕವಾಗಿದೆ. ಜೊತೆಗೆ ಅಮೆರಿಕ ಯಾವುದೇ ರೀತಿಯ transfer of technologyಯನ್ನ ಮಾಡೋದಿಲ್ಲ. ಜೊತೆಗೆ ಅಮೆರಿಕ ಯುದ್ಧ ವಿಮಾನಗಳ ನಿರ್ವಹಣಾ ವೆಚ್ಚ ಕೂಡ, ರಷ್ಯಾದ ಯುದ್ಧ ವಿಮಾನಗಳಿಗೆ ಹೋಲಿಸಿದ್ರೆ ಹೆಚ್ಚಾಗಿದೆ. ಹಾಗಾಗಿ ಭಾರತ ವಿಷಯದಲ್ಲಿ ಯಾವ ನಿರ್ಣಯ ಕೈಗೊಳ್ಳಲಿದೆ ಅನ್ನೋದು ಕುತೂಹಲ ಮೂಡಿಸಿದೆ!!

ಗಜಾನನ ಭಟ್‌

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿ

Show More

Related Articles

Leave a Reply

Your email address will not be published. Required fields are marked *

Back to top button