ಇಸ್ರೇಲ್ ವಿರುದ್ಧ 180 ಮಿಸೈಲ್ ದಾಳಿ: ಇರಾನ್ ನಿರ್ಣಯಕ್ಕೆ ಜಗತ್ತೇ ಗಡಗಡ!
ತೆಹ್ರಾನ್: ಇಸ್ರೇಲ್ ವಿರುದ್ಧ ಇರಾನ್ ಸೈನ್ಯವು ದಾಳಿ ನಡೆಸಿದೆ ಎಂಬ ಸುದ್ದಿ ಈಗ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಇರಾನ್ ಸೇನೆಯ ಮುಖ್ಯಸ್ಥರಾದ ಜನರಲ್ ಹೋಸೈನ್ ಸಾಮಿ, ಖಮೆನೆಯಿ ಅವರ ಆದೇಶದ ನಂತರ 180ಕ್ಕೂ ಹೆಚ್ಚು ಬಾಲಿಸ್ಟಿಕ್ ಮಿಸೈಲ್‌ಗಳನ್ನು ಇಸ್ರೇಲ್ ಮೇಲೆ ಕ್ಷಿಪ್ರವಾಗಿ ದಾಳಿ ಮಾಡಲು ಸೂಚನೆ ನೀಡಿದ್ದಾರೆ ಎಂಬ ವೀಡಿಯೋ ಹೊರಬಿದ್ದಿದೆ. ಈ ದಾಳಿಯ ಹಿಂದೆ ಇರಾನ್ ತನ್ನ ಶಕ್ತಿಯನ್ನು ಪ್ರದರ್ಶಿಸುತ್ತಿದ್ದು, ಅಮೆರಿಕಾ ಮತ್ತು ಯುರೋಪ್ ಕೂಡಲೇ ಇಸ್ರೇಲ್ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ, ಇನ್ನಷ್ಟು ದಾಳಿ ಮಾಡಲು ಸಿದ್ದವಿದೆ ಎಂದು ಸಾಮಿ ಹೇಳಿಕೆಯೊಂದರಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಘಟನೆಯು ವಿಶ್ವದ ರಾಜಕೀಯ ಮತ್ತು ಭದ್ರತಾ ವಲಯದಲ್ಲಿ ತೀವ್ರ ಕುತೂಹಲವನ್ನು ಉಂಟುಮಾಡಿದೆ. ಇಸ್ರೇಲ್ ವಿರುದ್ಧ ಇರಾನ್ ನಡೆಸಿದ ಈ ದೊಡ್ಡ ಮಟ್ಟದ ದಾಳಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಬಿಕ್ಕಟ್ಟುಗಳಿಗೆ ಕಾರಣವಾಗಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರ ವಿರುದ್ಧ ಇಸ್ರೇಲ್ ಮತ್ತು ಇತರ ರಾಷ್ಟ್ರಗಳ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಕಾದುನೋಡಬೇಕಿದೆ.