Alma Corner

ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಕೈ ನಾಯಕರ ಸಮಾವೇಶ

ಜೆಡಿಎಸ್‌ ಭದ್ರಕೋಟೆಯಲ್ಲಿ ಕೈ ನಾಯಕರ ಸಮಾವೇಶ ನಡೆಸಲು ದೊಡ್ಡಮಟ್ಟದ ತಯಾರಿಯನ್ನು ಮಾಡಿಕೊಳ್ಳಲಾಗಿದೆ. ನಾಳೆ ಹಾಸನದ ಅರಸಿಕೆರೆ ಎಸ್ಎಮ್ ಕೃಷ್ಣ ಬಡಾವಣೆಯ ಕೆ.ಸಿ.ಎ ಮೈದಾನದಲ್ಲಿ ಮದ್ಯಾಹ್ನ 12 ಗಂಟೆಗೆ ಕಾಂಗ್ರೆಸ್ ಪಕ್ಷದ ಸಮಾವೇಶ ನಡೆಯಲಿದ್ದು, ಕಾಂಗ್ರೆಸ್ ಪಕ್ಷ ವಿವಿಧ ರೀತಿಯ ತಯಾರಿಯನ್ನು ಮಾಡಿಕೊಂಡಿದೆ.

ಸಾವಿರಾರು ಜನರು ಬರುವ ನಿರೀಕ್ಷೆ ಇದ್ದು ಪೋಲೀಸ್‌ ಇಲಾಖೆ ಭದ್ರತೆ ತಯಾರಿಯನ್ನು ಮಾಡಿಕೊಂಡಿದೆ. ಎರಡು ಸಾವಿರಕ್ಕೂ ಹೆಚ್ಚು ಪೋಲೀಸರನ್ನು ನಿಯೋಜನೆ ಮಾಡಲಾಗಿದ್ದು ಭದ್ರತೆಗಾಗಿಯೆ 5 ಎಸ್‌ಪಿ, 6 ಎಎಸ್‌ಪಿ,12ಡಿವೈಎಸ್‌ಪಿ,80ಕ್ಕೂ ಹೆಚ್ಚು ಪಿಎಸ್‌ಐ ಗಳ ನೇತೃತ್ವದಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ. ಎಪ್ಪತ್ತು ಸಾವಿರ ಜನರಿಗೆ ಸಾಕಾಗುವ ಆಸನಗಳನ್ನ ಏರ್ಪಡಿಸಲಾಗಿದೆ.ಮೂರು ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದೆ. 2 ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಹಾಗೂ ಬೆಂಬಲಿಗರು ಭಾಗವಹಿಸುವ ಸಾಧ್ಯತೆ ಇದ್ದು, ಹಾಸನ ಮಾತ್ರವಲ್ಲದೆ ಚಿಕ್ಕಮಗಳೂರು, ಉಡುಪಿ, ಕೊಡಗು, ಮಂಡ್ಯದಿಂದ ಸಾಕಷ್ಟು ಪ್ರಮಾಣದಲ್ಲಿ ಜನರು ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ‌.

ಮೇಘಾ ಜಗದೀಶ

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿನಿ

Show More

Leave a Reply

Your email address will not be published. Required fields are marked *

Related Articles

Back to top button