ಫ್ಯಾಷನ್ ಯುಗದಲ್ಲಿಯೂ ಕಾಲುಂಗುರದ ವಿಶಿಷ್ಟ ಸ್ಥಾನ…!
ಭಾರತದಲ್ಲಿ, ಕಾಲುಂಗುರಗಳು ವಿವಾಹವಾಗಿರುವ ಮಹಿಳೆಯರು ಧರಿಸುವ ಸಾಂಪ್ರದಾಯಿಕ ಪದ್ಧತಿಯಾಗಿದೆ. ಅವುಗಳನ್ನು ಕಾಲಿನ ಎರಡನೇ ಬೆರಳಿಗೆ ಧರಿಸುತ್ತಾರೆ ಮತ್ತು ಕಾಲುಂಗರುಗಳನ್ನು ಮುಖ್ಯವಾಗಿ ಬೆಳ್ಳಿಯಿಂದ ತಯಾರಿಸುಲಾಗುತ್ತದೆ. ಭಾರತದಲ್ಲಿ, ವಿವಾಹವಾಗಿರುವ ಮುಹಿಳೆಯರು ಕಡ್ಡಾಯವಾಗಿ ಕಾಲುಂಗುರಗಳನ್ನು ಧರಿಸಿಬೇಕು ಮತ್ತು ಈ ಪದ್ಧತಿಯನ್ನು, ಹಿಂದು ಮತ್ತು ಮುಸ್ಲಿಮ್ ಮಹಿಳೆಯರಲ್ಲಿ ನಾವು ನೋಡಬಹುದು. ಈ ಆಭರಣವು ಶ್ರಂಗಾರದ ಜೊತೆಗೆ ವಿವಿಧ ಧಾರ್ಮಿಕ, ಆರೋಗ್ಯ ಮತ್ತು ಸಾಂಸ್ಕೃತಿಕ ಅಂಶಗಲನ್ನು ಒಳಗೊಂಡಿದೆ. ಕೇವಲ ಭಾರತೀಯ ಸಂಸ್ಕೃತಿಯಲ್ಲದೆ, ಇದು ಆಧುನಿಕ ಫ್ಯಾಷನ್ ಜಗತ್ತಿನಲ್ಲೂ ತನ್ನದೇ ಆದ ಸ್ಥಾನವನ್ನು ಗಳಿಸಿದೆ. ಪ್ರಸ್ತುತ ಕಾಲದಲ್ಲಿ, ಮಹಿಳೆಯರ ಅಭಿರುಚಿಗೆ ತಕ್ಕಂತೆ, ವಿವಿಧ ವಿನ್ಯಾಸಗಳಲ್ಲಿ ಕಾಲುಂಗರುಗಳು ದೊರೆಯುತ್ತವೆ.
1500-800BCEಯಲ್ಲೇ ಕಾಲುಂಗುರಗಳನ್ನು ಧರಿಸುವ ಪದ್ಧತಿಯಿತ್ತು. ಧಾರ್ಮಿಕ ಗ್ರಂಥಗಳಾದ ವೇದಗಳಲ್ಲಿ, ಈ ಬಗ್ಗೆ ಉಲ್ಲೇಖವಿದೆ. ಕಾಲಕ್ರಮೇಣ, ಕಾಲುಂಗುರಗಳನ್ನು ಧರಿಸುವ ಪದ್ಧತಿಯು ವಿಕಸನಗೊಂಡಿತು, ಇದು ಭಾರತೀಯ ಸಂಸ್ಕೃತಿಯಲ್ಲಿ ಪ್ರಮುಖ ಸಂಪ್ರದಾಯವಾಗಿ ಉಳಿದಿದೆ.
ಸಂಪ್ರಾದಾಯದ ಪ್ರಾಮುಖ್ಯತೆ:
ಸಾಮಾನ್ಯವಾಗಿ ಕಾಲುಂಗುರವನ್ನು ವಿವಾಹವಾಗಿರುವ ಮಹಿಳೆಯರು ಧರಿಸುತ್ತಾರೆ. ದಕ್ಷಿಣ ಭಾರತದ ವಿವಾಹ ಸಂಪ್ರದಾಯದಲ್ಲಿ, ವರ ಅಥವಾ ಸೋದರಮಾವ ವಧುವಿಗೆ ಕಾಲುಂಗುರವನ್ನು ತೊಡಿಸುತ್ತಾರೆ. ಆಯುರ್ವೇದದ ಪ್ರಕಾರ, ಕಾಲುಂಗುರ ಧರಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಪ್ರಯೋಜನಕಾರಿಯಾಗಿದೆ. ಇದು ಕಾಲು ಬೆರಳಿನ ನರಗಳ ಮೂಲಕ ರಕ್ತಿಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ಋತುಚಕ್ರವನ್ನು ನಿಯಂತ್ರಿಸಲು ಸಹಾಯಕವಾಗುತ್ತದೆ ಎಂದು ನಂಬಲಾಗಿದೆ.
ಬೆಳ್ಳಿಯಿಂದ ತಯಾರಾಗುವ ಕಾಲುಂಗುರಗಳು ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಈ ಕಾಲುಂಗುರಗಳನ್ನು ಸಮಾರಂಭದಲ್ಲಿ ಮಾತ್ರವಲ್ಲದೇ, ದೈನಂದಿನ ಜೀವನದಲ್ಲೂ ಧರಿಸುತ್ತಾರೆ. ಕಾಲುಂಗುರಗಳು ವಿವಿಧ ವಿನ್ಯಾಸಗಳಲ್ಲಿ ಸಿಗುವುದರಿಂದ, ಇವು ಮಹಿಳೆಯರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಫ್ಯಾಷನ್ :
ಪ್ರಸ್ತುತ ಕಾಲದಲ್ಲಿ, ಕಾಲುಂಗುರ ಕೇವಲ ಸಂಪ್ರದಾಯಕ್ಕೆ ಸೀಮಿತವಾಗಿಲ್ಲ. ಇದು ಫ್ಯಾಷನ್ ಅಂಶವಾಗಿ ಎಲ್ಲ ಮಹಿಳೆಯರ ನಡುವೆ ಹೆಚ್ಚು ಜನಪ್ರಿಯವಾಗಿದೆ. ವಿವಿಧ ವಿನ್ಯಾಸ ಮತ್ತು ಬಣ್ಣಗಳಿಂದ ತಯಾರಿಸುವ ಕಾಲುಂಗುರಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಮಹಿಳೆಯರು ತಮ್ಮ ಉಡುಪುಗಳಿಗೆ ಹೊಂದುವ ರೀತಿಯಲ್ಲಿ ಕಾಲಂಗುರಗಳನ್ನು ಧರಿಸುತ್ತಾರೆ. ಈ ಪದ್ಧತಿಯು ಕೇವಲ ಗ್ರಾಮೀಣ ಪ್ರದೇಶಗಳಲ್ಲದೆ, ನಗರ ಪ್ರದೇಶಗಳಲ್ಲಿಯೂ ವ್ಯಾಪಕವಾಗಿದೆ. ಇಂದಿನ ಫ್ಯಾಷನ್ ಯುಗದಲ್ಲಿ ಕೂಡ, ಕಾಲುಂಗುರಗಳ ಮಹತ್ವ ಕುಂದಿಲ್ಲ.
ಧನ್ಯಾ ರೆಡ್ಡಿ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ